ಸೋಮವಾರ, ಏಪ್ರಿಲ್ 12, 2021
30 °C

ತಾವರಗೇರಾ: ಸಮಗ್ರ ಮೌಲ್ಯಮಾಪನ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾವರಗೇರಾ: ಸಮಗ್ರ ಮೌಲ್ಯಮಾಪನ ತರಬೇತಿ

ಕುಷ್ಟಗಿ:  ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗಾಗಿ ತಾಲ್ಲೂಕಿನ ತಾವರಗೇರಾದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ `ನಿರಂತ ಸಮಗ್ರ ಮೌಲ್ಯ   ಮಾಪನ~ ವಿಷಯ ಕುರಿತ ತರಬೇತಿ ಕಾರ್ಯಗಾರ ನಡೆಯಿತು.ಉದ್ಘಾಟಿನೆ ನೆರವೇರಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಕೊಪ್ಪಳ ಜಿಲ್ಲೆ ನಿರ್ದೇಶಕ ಶಿವಾನಂದ ಕಡಪಟ್ಟಿ, ನಿರಂತರ ಸಮಗ್ರ ಮೌಲ್ಯಮಾಪನದಿಂದ  ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ವೃದ್ಧಿಯಾಗುತ್ತದೆ. ಈ ವಿಷಯದಲ್ಲಿ ಉಪನ್ಯಾಸಕರು ಆಸಕ್ತಿ ವಹಿಸಬೇಕಿದೆ ಎಂದು ಹೇಳಿದರು.ಅತಿಥಿಯಾಗಿದ್ದ ಡಾ.ಶಾಹಮೀದ ದೋಟಿಹಾಳ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡಲು ಉಪನ್ಯಾಸಕರು ಶ್ರಮಿಸಿದರೆ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದರು.ಗ್ರಾಮದ ಪ್ರಮುಖರಾದ ಪ್ರಹ್ಲಾದಗೌಡ ಮೆದಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಸಂಸ ಮುಖಂಡ ಪಿ.ರಮೇಶ್, ಗೀತಾಲಕ್ಷ್ಮಿ, ವಿ.ಬಿ.ರಡ್ಡೇರ, ಎಸ್.ಗೋಡೆ, ರಮೇಶಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಎ.ಜಿ.ಶರಣಪ್ಪ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.ತಾಲ್ಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.ಲತಾಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ, ವಸಂತ ಮಾಧವ ನಿರೂಪಿಸಿದರು. ನಸೀಮ್‌ಭಾನು ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.