ತಾವರೆಕೆರೆ ಗ್ರಾ.ಪಂ.ಗೆ ಪ್ರಶಸ್ತಿಯ ಗರಿ

ಬುಧವಾರ, ಜೂಲೈ 17, 2019
23 °C

ತಾವರೆಕೆರೆ ಗ್ರಾ.ಪಂ.ಗೆ ಪ್ರಶಸ್ತಿಯ ಗರಿ

Published:
Updated:

ಚನ್ನಗಿರಿ: ತಾಲ್ಲೂಕು ಉಬ್ರಾಣಿ ಹೋಬಳಿಯ ತಾವರೆಕೆರೆ ಗ್ರಾ.ಪಂ.ಗೆ ಈ ವರ್ಷದ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಈಗಾಗಲೇ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಪಡೆದುಕೊಂಡು ಬಂದಿದ್ದಾರೆ.ಇತ್ತೀಚೆಗೆ ಗ್ರಾ.ಪಂ. ಅಧ್ಯಕ್ಷೆ ಸಾಹೀರಾಬಾನು ಹಾಗೂ ಸದಸ್ಯರು ಪ್ರಶಸ್ತಿಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಿ ಸಂಭ್ರಮಪಟ್ಟರು. ಈ ಗ್ರಾ.ಪಂ. ವ್ಯಾಪ್ತಿಗೆ ತಾವರೆಕೆರೆ, ಮಸಣಿಕೆರೆ, ಗೊಂದಿ ಹೊಸಹಳ್ಳಿ ಹಾಗೂ ಮುಗಳಿಹಳ್ಳಿ ಗ್ರಾಮಗಳು ಒಳಪಡುತ್ತವೆ. ಈ ನಾಲ್ಕು ಗ್ರಾಮ ಸೇರಿ 1,500 ಕುಟುಂಬಗಳು ಇವೆ. ಒಟ್ಟಾರೆ ಶೇ. 80ರಷ್ಟು ಪ್ರಮಾಣದಲ್ಲಿ ಶೌಚಾಲಯಗಳನ್ನು ಈ ಗ್ರಾಮಗಳಲ್ಲಿ ನಿರ್ಮಿಸಿದ್ದರ ಪರಿಣಾಮ ಪ್ರಶಸ್ತಿ ಲಭಿಸಿದೆ.ಈ ಗ್ರಾಮಗಳಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರು ಹೆಚ್ಚಾಗಿ ವಾಸಮಾಡುತ್ತಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಸಾಹೀರಾಬಾನು ಸೇರಿದಂತೆ ಉಳಿದ 11 ಸದಸ್ಯರು ಜನರಲ್ಲಿ ಅರಿವು ಮೂಡಿಸುವಲ್ಲಿ ತುಂಬಾ ಸಹಕಾರ ನೀಡಿದ್ದಾರೆ. ಶೌಚಾಲಯಗಳ ಬಗ್ಗೆ ಈ ಜನರಲ್ಲಿ ಅರಿವನ್ನು ಮೂಡಿಸಿ ಸಹಾಯಧನವನ್ನು ನೀಡಿ ನಿರ್ಮಾಣ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ. 100ರಷ್ಟು ಸಾಧನೆ ಮಾಡಬೇಕೆಂಬ ಗುರಿಯನ್ನು ಹೊಂದಿದ್ದೇವೆ ಎಂದು ಪಿಡಿಒ ರೇಖಾ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry