ತಾಷ್ಕೆಂಟ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ:ಪ್ರಧಾನ ಹಂತಕ್ಕೆ ಸನಮ್

7

ತಾಷ್ಕೆಂಟ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ:ಪ್ರಧಾನ ಹಂತಕ್ಕೆ ಸನಮ್

Published:
Updated:
ತಾಷ್ಕೆಂಟ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ:ಪ್ರಧಾನ ಹಂತಕ್ಕೆ ಸನಮ್

ತಾಷ್ಕೆಂಟ್ (ಐಎಎನ್‌ಎಸ್):  ಡೇವಿಸ್ ಕಪ್‌ಆಟಗಾರರಾದ ಭಾರತದ ವಿಷ್ಣುವರ್ಧನ್ ಹಾಗೂ ಸನಮ್ ಸಿಂಗ್ ಇಲ್ಲಿ ನಡೆಯುತ್ತಿರುವ ತಾಷ್ಕೆಂಟ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಪ್ರಧಾನ ಹಂತದಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ.ಒಲಿಂಪಿಕ್ ಟೆನಿಸ್ ಸ್ಕೂಲ್     ಕೋರ್ಟ್‌ನಲ್ಲಿ ಸೋಮವಾರ ನಡೆದ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ವಿಷ್ಣುವರ್ಧನ್ 2-6, 6-1, 7-6ರಲ್ಲಿ ಜರ್ಮನಿಯ ಮಾರ್ಟಿನ್ ಎಮ್ರಿಚ್ ಎದುರು ಗೆಲುವು ಸಾಧಿಸಿದರು.

267ನೇ ರ‌್ಯಾಂಕ್‌ನ ಆಟಗಾರ ವಿಷ್ಣು ಮೊದಲ ಸೆಟ್‌ನಲ್ಲಿ ಸೋಲು ಕಂಡರು.ಆದರೆ ತಕ್ಷಣವೇ ಸುಧಾರಿಸಿಕೊಂಡ ಅವರು ಅಮೋಘ ಆಟದ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಅದಕ್ಕೆ ಎರಡನೇ ಸೆಟ್‌ನಲ್ಲಿ ಗೆದ್ದ ಅಂತರವೇ ಸಾಕ್ಷಿ. ಕುತೂಹಲಕ್ಕೆ ಕಾರಣವಾಗಿದ್ದ ನಿರ್ಣಾಯಕ ಸೆಟ್‌ನ 11ನೇ ಗೇಮ್‌ನಲ್ಲಿ ಎದುರಾಳಿ ಸರ್ವ್ ಬ್ರೇಕ್ ಮಾಡಿ ಮುನ್ನಡೆ ಸಾಧಿಸಿದರು. ಆದರೆ 12ನೇ ಗೇಮ್‌ನಲ್ಲಿ ತಮ್ಮ ಸರ್ವ್‌ನಲ್ಲಿಯೇ ಎಡವಿದರು. ಹಾಗಾಗಿ ಈ ಸೆಟ್ ಟೈ ಬ್ರೇಕರ್ ಹಂತ ತಲುಪಿತ್ತು. ಅತ್ಯುತ್ತಮ ವಿನ್ನರ್‌ಗಳನ್ನು ಸಿಡಿಸಿದ ಭಾರತದ ಆಟಗಾರ ಟೈಬ್ರೇಕರ್‌ನಲ್ಲಿ ಬೇಗನೇ ಮುನ್ನಡೆ ಕಂಡುಕೊಂಡರು.ಈ ಹೋರಾಟ 123 ನಿಮಿಷ ನಡೆಯಿತು. ವಿಷ್ಣು 20 ಏಸ್‌ಗಳನ್ನು ಸಿಡಿಸಿ ಮಿಂಚಿದರು. ಪ್ರಧಾನ ಹಂತದಲ್ಲಿ ಆಡಲು ಅವಕಾಶ ಪಡೆದುಕೊಂಡಿರುವುರಿಂದ ಐದು ಎಟಿಪಿ ಪಾಯಿಂಟ್‌ಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಅವರು ಮಂಗಳವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಐಗೊರ್ ಕುನಿಸ್ತಿನ್ ಅವರನ್ನು ಎದುರಿಸಲಿದ್ದಾರೆ.ಮತ್ತೊಂದು ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತದ ಸನಮ್ 6-2, 6-0ರಲ್ಲಿ ಜಾರ್ಜಿಯಾದ ನಿಕೊಲೊಜ್ ಬಾಸಿಲಾಶ್ವಿಲಿ ಎದುರು ಗೆದ್ದರು. ಈ ಹೊರಾಟ ಕೇವಲ 53 ನಿಮಿಷದಲ್ಲಿ ಅಂತ್ಯಗೊಂಡಿತು.

ತಮಗಿಂತ ಹೆಚ್ಚಿನ ರ‌್ಯಾಂಕ್ ಹೊಂದಿರುವ ಹಾಗೂ ಬಲಿಷ್ಠವಾಗಿರುವ ಆಟಗಾರನ ಎದುರು ಸನಮ್ ಪೂರ್ಣ ಮೇಲುಗೈ ಸಾಧಿಸಿದರು.ಅವರಿಗೆ ಬಿಟ್ಟುಕೊಟ್ಟಿದ್ದು ಕೇವಲ ಎರಡು ಗೇಮ್. 355ನೇ ರ‌್ಯಾಂಕ್‌ನಲ್ಲಿರುವ ಭಾರತದ ಈ ಆಟಗಾರ ಪ್ರಧಾನ ಹಂತದ ಮೊದಲ ಪಂದ್ಯದಲ್ಲಿ ಉಕ್ರೇನ್‌ನ ಒಲೆಕ್ಸಾಂಡ್ರ್ ನೆದೊವಿಸೊವ್ ಎದುರು ಆಡಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry