ಮಂಗಳವಾರ, ಮೇ 11, 2021
26 °C

ತಿಂಗಳ ವೇತನ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರವಾಹ ಪೀಡಿತ ಉತ್ತರಪ್ರದೇಶಕ್ಕೆ ನೆರವಾಗುವುದಕ್ಕಾಗಿ ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರಿಗೆ ಶುಕ್ರವಾರ ಸೂಚಿಸಿದ್ದಾರೆ.`ಪರಿಹಾರ ಕಾರ್ಯಕ್ಕಾಗಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ್ಙ10 ಲಕ್ಷ ನೀಡುವಂತೆಯೂ ಅವರು ಪಕ್ಷದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಸೂಚಿಸಿದ್ದಾರೆ' ಎಂದು ಪಕ್ಷದ  ಸಂವಹನ ಇಲಾಖೆಯ ಮುಖ್ಯಸ್ಥ ಅಜಯ್ ಮಾಕನ್ ಹೇಳಿದ್ದಾರೆ.ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ 203 ಮತ್ತು ರಾಜ್ಯಸಭೆಯಲ್ಲಿ 72 ಸದಸ್ಯರನ್ನು ಹೊಂದಿದೆ. ಪರಿಹಾರ ಕಾರ್ಯವನ್ನು ಮತ್ತಷ್ಟು ಬಿರುಸುಗೊಳಿಸಲು ಕಾಂಗ್ರೆಸ್ ಪಕ್ಷವು ಡೆಹ್ರಾಡೂನ್‌ನಲ್ಲಿ ಪಿಸಿಸಿ ನಿಯಂತ್ರಣ ಕೊಠಡಿಯನ್ನೂ ಸ್ಥಾಪಿಸಿದೆ.ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳಲು ಎಐಸಿಸಿ ಕಾರ್ಯದರ್ಶಿ ಸಂಜಯ್ ಕಪೂರ್ ಮತ್ತು  ಪಕ್ಷದ ಅಂಗ ಸಂಸ್ಥೆ ಸೇವಾ ದಳದ ಮುಖ್ಯಸ್ಥ ಮಹೇಂದ್ರ ಜೋಶಿ ಅವರನ್ನು ಡೆಹ್ರಾಡೂನ್‌ಗೆ ಕಳುಹಿಸಲಾಗಿದೆ.`ಆಯಾ ರಾಜ್ಯಗಳ ಪರಿಹಾರ ಸಮಗ್ರಿಗಳನ್ನು ತಕ್ಷಣವೇ ಉತ್ತರಾಖಂಡಕ್ಕೆ ರವಾನಿಸುವಂತೆ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರಿಗೆ ಸೂಚಿಸಲಾಗಿದೆ' ಎಂದೂ ಮಾಕನ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.