ತಿಂಗಳ ಸಂಗೀತ

7

ತಿಂಗಳ ಸಂಗೀತ

Published:
Updated:
ತಿಂಗಳ ಸಂಗೀತ

ಶ್ರೀ ಮಹಾಗಣಪತಿ ಸಂಗೀತ ಸಭಾ: ಭಾನುವಾರ (ಮೇ 20) ತಿಂಗಳ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಶಾಂತಿರಾವ್ ಅವರಿಂದ ವೀಣಾ ವಾದನ. ವಿ.ಎಸ್. ರಾಜಗೋಪಾಲ್ (ಮೃದಂಗ), ಸಿ.ಎನ್.ಆನಂದ್ (ಘಟ) ವಾದ್ಯ ಸಹಕಾರ ನೀಡಲಿದ್ದಾರೆ.ಶಾಂತಿರಾವ್ ಅವರ ಸಂಪ್ರದಾಯಬದ್ಧ ವೀಣಾ ವಾದನ ಶೈಲಿಯು ರಾಗ, ಕೃತಿ ಹಾಗೂ ಸ್ವರದ `ಶಾಸ್ತ್ರೀಯತೆ~ಯಿಂದಾಗಿ ಸಂಗೀತಾಸಕ್ತರನ್ನು ಹಿಡಿದಿಡುತ್ತದೆ. ದೇಶದೆಲ್ಲೆಡೆ ಮಾತ್ರವಲ್ಲದೆ ಸಿಂಗಪೂರ್, ಮಲೇಷಿಯಾ, ಜರ್ಮನಿ ಹಾಗೂ ಇಂಗ್ಲೆಂಡ್‌ನಲ್ಲೂ ಕಛೇರಿ ನಡೆಸಿದ್ದಾರೆ.ಚೆನ್ನೈನ ಸಂಗೀತ ಅಕಾಡೆಮಿ, ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ, ಬೆಂಗಳೂರು ಗಾಯನ ಸಮಾಜದ ಪ್ರಶಸ್ತಿಗಳೂ ಇವರಿಗೆ ಸಂದಿವೆ.ಸ್ಥಳ: ಮಹಾಗಣಪತಿ ದೇವಸ್ಥಾನ, ವಿನಾಯಕನಗರ, ದೇವಸಂದ್ರ, ಕೃಷ್ಣರಾಜಪುರ. ಸಂಜೆ 6 ರಿಂದ 8.30 ಮಾಹಿತಿಗೆ: 96329 77977

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry