ಶನಿವಾರ, ಜನವರಿ 18, 2020
18 °C

ತಿಂಡಿಯಲ್ಲಿ ಹುಳು ; ವಿದ್ಯಾರ್ಥಿಗಳ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಪಟ್ಟಣದ ಉಪ್ಪಾರ ಕಾಲೊನಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹುಳು ಬಿದ್ದಿರುವ ತಿಂಡಿ, ಊಟವನ್ನು ನೀಡುತ್ತಿ­ದ್ದಾರೆ ಎಂದು ಆರೋಪಿಸಿ ವಸತಿ ಶಾಲೆ ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು.ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಮಲಗುವ ಜಾಗದಲ್ಲಿಯೇ  ತರಗತಿ­ಗಳು ನಡೆಯುತ್ತಿವೆ. ಅಲ್ಲಿಯೇ ಅಡುಗೆ­ಯನ್ನು ಸಿದ್ಧಪಡಿಸಲಾಗುತ್ತಿದೆ. ಹಾಸ್ಟೆಲ್‌ ಸಿಬ್ಬಂದಿ ಆಹಾರ ಪದಾರ್ಥ­ಗಳನ್ನು ಸ್ವಚ್ಛಗೊಳಿಸದೇ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.ಪ್ರತಿನಿತ್ಯ ನೀಡುವ ಆಹಾರದಲ್ಲಿ ಹುಳು ಇರುವ ಬಗ್ಗೆ ಹೊರಗುತ್ತಿಗೆ ಸಿಬ್ಬಂದಿಗೆ ಪ್ರಶ್ನಿಸಿದರೆ ಅವಾಚ್ಯವಾಗಿ ಬೈಯುತ್ತಾರೆ. ಶೌಚಾಲಯ ಸ್ವಚ್ಛಗೊಳಿ­ಸು­ವು­ದಿಲ್ಲ. ಸಿಬ್ಬಂದಿ ಇದ್ದರೂ ನಮ್ಮ ಕೈಯಲ್ಲಿಯೇ ಕಸ ಗುಡಿಸಲು ಹೇಳು­ತ್ತಾರೆ ಎಂದು ಅಳಲು ತೋಡಿ­ಕೊಂಡರು.ಶಾಲೆಯ ಕಿಟಕಿ ಬಾಗಿಲುಗಳು ಮುರಿ­ದಿವೆ. 6ನೇ ತರಗತಿ ಮಕ್ಕಳಿಗೆ ಹೊದಿಕೆ ನೀಡಿಲ್ಲ. ಚಳಿಯಲ್ಲಿಯೇ ಮಲಗಬೇಕಾ­ಗಿದೆ. ಕುಡಿದು ಬರುವ ಸಿಬ್ಬಂದಿ ಬಗ್ಗೆ ವಾರ್ಡನ್‌ಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶಗೊಂಡು ಹೇಳಿದರು.ಪ್ರತಿನಿತ್ಯ ಅನ್ನ, ಸಾಂಬರ್, ತಿಂಡಿ­ಯಲ್ಲಿ ಹುಳುಗಳು ಇದ್ದರೂ ಅನಿ­ವಾರ್ಯ­ವಾಗಿ ತಿನ್ನಲೇಬೇಕಾಗಿದೆ. ಚಳಿ ಹಾಗೂ ಸೊಳ್ಳೆಗಳಿಂದ ನಿದ್ದೆಯೂ ಬರುವುದಿಲ್ಲ. ಹಲವರಿಗೆ ಚಳಿಯಿಂದ ಜ್ವರ ಬಂದು ಅನಾರೋಗ್ಯಕ್ಕೆ ಗುರಿ­ಯಾಗುತ್ತಿದ್ದಾರೆ ಎಂದು ದೂರಿದರು.ಸಂಬಂಧಪಟ್ಟ ಉನ್ನತ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಸಮಸ್ಯೆ ಸರಿಪಡಿಸಬೇಕು ಎಂದು ವಿದ್ಯಾರ್ಥಿನಿ­ಯರು ಆಗ್ರಹಿಸಿದರು.ಕೊನೆಗೆ ವಾರ್ಡನ್‌ ಬಂದು ವಿದ್ಯಾರ್ಥಿ­ನಿಯರಿಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿ ಸಮಾಧಾನ­ಗೊಳಿಸಿದರು.

ಪ್ರತಿಕ್ರಿಯಿಸಿ (+)