ತಿಕೋಟಾ ನೀರಿನ ಯೋಜನೆಗೆ ಟೆಂಡರ್: ಪಾಟೀಲ

7

ತಿಕೋಟಾ ನೀರಿನ ಯೋಜನೆಗೆ ಟೆಂಡರ್: ಪಾಟೀಲ

Published:
Updated:

ವಿಜಾಪುರ: ತಿಕೋಟಾ ಸೇರಿದಂತೆ ತಿಕೋಟಾ ಹೋಬಳಿಯ 24 ಗ್ರಾಮ ಗಳಿಗೆ ಶುದ್ಧ ಕುಡಿಯವ ನೀರು ಪೂರೈ ಸುವ  ಯೋಜನೆಗೆ ಟೆಂಡರ್ ಕರೆಯಲಾ ಗಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದರು.ತಾಲ್ಲೂಕಿನ ಧನ್ನರ್ಗಿ ಗ್ರಾಮದ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ  ಎತ್ತಿನಗಾಡಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ದರು.ರೂ. 56 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಕೃಷ್ಣಾ ನದಿಯಿಂದ ನೀರು ಎತ್ತಿ, ಅದನ್ನು ಶುದ್ಧೀಕರಿಸಿ ಪ್ರತಿ ಗ್ರಾಮ ಗಳಿಗೆ ಶುದ್ಧ ಕುಡಿಯುವ ನೀರು ಪೂರೈಸ ಲಾಗುವುದು. ಒಂದು ವರ್ಷದಲ್ಲಿ ಕಾಮ ಗಾರಿ ಪೂರ್ಣಗೊಳ್ಳಲಿದೆ ಎಂದರು.ಗ್ರಾಮೀಣ ಕ್ರೀಡೆಗಳು ನಮ್ಮ ರೈತರ ಬದುಕಿನ ಭಾಗ. ಅನೇಕ ಕಡೆ ಈ ಕ್ರೀಡೆ ಗಳು ಕ್ರಮೇಣ ನಶಿಸುತ್ತಿವೆ. ತಿಕೋಟಾ ಭಾಗದಲ್ಲಿ ಇಂದಿಗೂ ಸಹ ಈ ಕ್ರೀಡೆಗಳು ಉಳಿದುಕೊಂಡಿರುವುದು ಸಂತಸದ ಸಂಗತಿ ಎಂದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ತಾಲ್ಲೂಕು ಪಂಚಾಯಿತಿ ಸದಸ್ಯ ವಿ.ಎಂ. ಪಾಟೀಲ, ಸಿದ್ದಣ್ಣ ಸಕ್ರಿ, ಗ್ರಾಮಸ್ಥರಾದ ಲಾಯಪ್ಪ ವಠಾರ, ದುಂಡಪ್ಪ ವಠಾರ, ಶಿವಪ್ಪ ಮೇಲಿನಕೇರಿ, ಮಹಾದೇವ ವಠಾರ, ಬಸವರಾಜ ತೇಲಿ, ಅಮಗೊಂಡ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry