ಗುರುವಾರ , ಜುಲೈ 29, 2021
24 °C

ತಿಗಳ ವಿದ್ಯಾರ್ಥಿಗಳಿಗೆ ಕಡ್ಡಾಯ ಶಿಕ್ಷಣ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ತಿಗಳ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮುದಾಯದ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಡ್ಡಾಯ ಶಿಕ್ಷಣ ನೀಡಬೇಕೆಂದು ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ಹೇಳಿದರು. ಪಟ್ಟಣದ ತಿಗಳರ ಕ್ಷೇಮಾಭಿವೃದ್ಧಿ ಸಂಘಕ್ಕೆ ಭೇಟಿನೀಡಿದ ಅವರು ಇಲ್ಲಿ ಮುಖಂಡರೊಂದಿಗೆ ಸಮಾಲೋಚಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ‘ನಮ್ಮ ಸಮುದಾಯವು ಅತ್ಯಂತ ಹಿಂದುಳಿದಿದೆ. ನಮ್ಮನ್ನು ರಾಜಕೀಯವಾಗಿ ಎಲ್ಲಾ ಪಕ್ಷಗಳು ಕಡೆಗಣಿಸಿವೆ. ಆದ್ದರಿಂದ ಸಮುದಾಯವನ್ನು ಮೊದಲು ರಾಜ್ಯದಾದ್ಯಂತ ಸಂಘಟಿಸಿ ರಾಜಕೀಯವಾಗಿ ಶಕ್ತಿ ಪ್ರದರ್ಶನ ಮಾಡಿ, ರಾಜಕೀಯ ಸ್ಥಾನಮಾನಗಳನ್ನು ಪಡೆಯಬೇಕೆಂದು ಅಭಿಪ್ರಾಯಪಟ್ಟರು.ತಾಲ್ಲೂಕಿನಲ್ಲಿ ಸಂಘದ ಹೆಸರಿನಲ್ಲಿ ಮೊದಲು ಒಂದು ನಿವೇಶನ ಮಾಡಬೇಕಿದೆ. ಆ ಜಾಗದಲ್ಲಿ ವಿದ್ಯಾಸಂಸ್ಥೆಯನ್ನು ತೆರೆದು ಸಮುದಾಯದಲ್ಲಿ ಅತ್ಯಂತ ಹಿಂದುಳಿದ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವಂತ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ವಿದ್ಯಾಭ್ಯಾಸ ಕೊಡುವ ಇಂಗಿತ ವ್ಯಕ್ತಪಡಿಸಿದರು. ಅದಕ್ಕೆ ಸಮುದಾಯದ ಎಲ್ಲಾ ಮುಖಂಡರು ಸಮ್ಮತಿಸಿದರು.ಸಮುದಾಯದಲ್ಲಿ ಶಿಕ್ಷಣ ಪಡೆದಿರುವ ಮಕ್ಕಳಿಗೆ ಸೂಕ್ತ ಮಾರ್ಗದರ್ಶನವಿಲ್ಲ. ಜೊತಗೆ ಉದ್ಯೋಗದಿಂದ ವಂಚಿತರಾಗಿದ್ದಾರೆ. ಆದ್ದರಿಂದ ತಾಲ್ಲೂಕಿನ ಸಂಘದ ಕಚೇರಿಯಲ್ಲಿ ಉದ್ಯೋಗ ಮಾಹಿತಿ ಕೇಂದ್ರವನ್ನು ತೆರೆದು ಮಾರ್ಗದರ್ಶನ ನೀಡಿ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡುವ ಚಿಂತನೆ ನಡೆಸಿರುವುದಾಗಿ ತಿಳಿಸಿದರು.ತಾಲ್ಲೂಕು ಅಧ್ಯಕ್ಷ ತಿಮ್ಮರಾಯಿಗೌಡ ಮತ್ತು ಮಾಜಿ ಅಧ್ಯಕ್ಷ ನಂಜೇಗೌಡ ಮಾತನಾಡಿ, ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ಎರಡು ಸಂಘಗಳನ್ನು ವಿಲೀನಗೊಳಿಸಿ ಜನಾಂಗವನ್ನು ಅಭಿವೃದ್ಧಿಪಡಿಸಿಬೇಕು. ಈ ಹಿಂದೆ ಇದ್ದಂತಹ ಗ್ರಾಮ ಶಾಖೆಗಳು ನಿಷ್ಕ್ರಿಯವಾಗಿದ್ದು ಅವುಗಳನ್ನು ಮತ್ತೆ ಪುನಶ್ಚೇತನಗೊಳಿಸಿ ಗ್ರಾಮ ಮಟ್ಟದಿಂದ ಸಂಘವನ್ನು ಬಲಪಡಿಸಬೇಕೆಂದು ಹೇಳಿದರು.ಸಮುದಾಯ ಸಾಕಷ್ಟು ಬಡ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಠದಿಂದ ಉನ್ನತ ವಿದ್ಯಾಭ್ಯಾಸ ಮಾಡದೆ ಶಿಕ್ಷಣವನ್ನು ಮೊಟುಕುಗೊಳಿಸಿದ್ದಾರೆ. ಅಂಥ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘದ ವತಿಯಿಂದ ಉನ್ನತ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.ರಾಜ್ಯ ಕಾರ್ಯಾಧ್ಯಕ್ಷ ಕುಮಾರ್, ಜಂಟಿಕಾರ್ಯದರ್ಶಿ ಶಿವನಂಜಯ್ಯ, ಜಿಲ್ಲಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಯ್ಯ, ಖಜಾಂಚಿ ಕೃಷ್ಣಯ್ಯ, ಸದಸ್ಯರಾದ ಶ್ರೀಕಂಠಯ್ಯ, ಲಕ್ಷ್ಮಣ್, ಸಮಿತಿ ಅಧ್ಯಕ್ಷ ಚಿಕ್ಕಸ್ವಾಮಿ, ಕಾರ್ಯಾಧ್ಯಕ್ಷ ಎಸ್.ಮಹೇಶ್, ಉಪಾಧ್ಯಕ್ಷರಾದ ಎ.ಎಂ.ಶಿವನಂಜಯ್ಯ, ಶ್ರೀನಿವಾಸ್, ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಮರೀಗೌಡ, ಖಜಾಂಜಿ ಸಿ.ಎಸ್.ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ, ರಮೇಶ್, ಜಂಟಿ ಕಾರ್ಯದರ್ಶಿ ಎ.ರಾಜೀವ, ಎ.ವಿ.ಮಾದೇಶ್, ನಿರ್ದೇಶಕ ಕುಮಾರ್ ಮೊದಲಾದವರು ಹಾಜರಿದ್ದರು.ಊರಹಬ್ಬಕ್ಕೆ ಚಾಲನೆ


ಮಾಗಡಿ:  ತಾಲ್ಲೂಕಿನ ವ್ಯಾಸರಾಯನ ಪಾಳ್ಯ ಮತ್ತು ಪರಂಗಿಚಿಕ್ಕನಪಾಳ್ಯದ ಊರಹಬ್ಬಕ್ಕೆ ಮಂಗಳವಾರ ಸಂಜೆ ಗ್ರಾಮದೇವತೆಗಳ ಪೂಜಾ ಉತ್ಸವದೊಂದಿಗೆ ಚಾಲನೆ ನೀಡಲಾಯಿತು. ವ್ಯಾಸರಾಯನ ಪಾಳ್ಯದಲ್ಲಿ ಮುತ್ತುರಾಯ ಸ್ವಾಮಿ, ಪರಂಗಿಚಿಕ್ಕನಪಾಳ್ಯದ ಏಳುಮಂದಮ್ಮದೇವಿಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸಿ, ಉತ್ಸವಕ್ಕೆ ಚಾಲನೆ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.