ಭಾನುವಾರ, ಅಕ್ಟೋಬರ್ 20, 2019
27 °C

ತಿಪ್ಪಸಂದ್ರ: ತಂಗುದಾಣ ಲೋಕಾರ್ಪಣೆ

Published:
Updated:

ರಾಮನಗರ: ಮಾಗಡಿ ತ್ಲ್ಲಾಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ ಗ್ರಾಮ ಪಂಚಾಯತಿಯು ಗ್ರಾಮ ಸ್ವರಾಜ್ ಕ್ರಿಯಾ ಯೋಜನೆಯಡಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಅರ್ಪಿಸಿದೆ.ಸುಮಾರು 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿ ಸುಂದರ, ಸುಸಜ್ಜಿತ ತಂಗುದಾಣವನ್ನು ಇತ್ತೀಚೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಉದ್ಘಾಟಿಸಿ ಗ್ರಾಮದ ಜನತೆಗೆ ಸಮರ್ಪಿಸಿದ್ದಾರೆ.ತ್ಲ್ಲಾಲೂಕಿನ ಪ್ರಮುಖ ಹೋಬಳಿಗಳಲ್ಲಿ ತಿಪ್ಪಸಂದ್ರ ಹೋಬಳಿಯೂ ಒಂದು. 65 ಗ್ರಾಮಗಳನೊಳಗೊಂಡಿರುವ ಈ ಹೋಬಳಿಯು ಸುಮಾರು 24,000 ಸಾವಿರ ಜನಸಂಖ್ಯೆ ಹೊಂದಿದೆ.ಗ್ರಾಮದಲ್ಲಿ ಸರ್ಕಾರಿ ವಾಹನಗಳು, ಖಾಸಗಿ ವಾಹನಗಳು, ಶಾಲಾ ವಾಹನಗಳು ಪ್ರತಿದಿನ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಮತ್ತು ಶಾಲಾಮಕ್ಕಳಿಗೆ, ವಿವಿಧ ಗ್ರಾಮಗಳಿಂದ ಆಗಮಿಸುವ ಪ್ರಯಾಣಿಕರಿಗೆ ಹಾಗೂ ಈ ಭಾಗದ ರೈತರು ಅನುಕೂಲಕವಾಗುವಂತೆ ಈ ತಂಗುದಾಣ ನಿರ್ಮಿಸಿರುವುದು ಗ್ರಾಮದ ಜನತೆಯಲ್ಲಿ ಸಂತಸ ಮೂಡಿಸಿದೆ.

Post Comments (+)