ತಿಪ್ಪೆ ಹಿಂದೆ ಮರೆಯಾದ ಮಹಿಳಾ ಶೌಚಾಲಯ

7

ತಿಪ್ಪೆ ಹಿಂದೆ ಮರೆಯಾದ ಮಹಿಳಾ ಶೌಚಾಲಯ

Published:
Updated:

ಹಗರಿಬೊಮ್ಮನಹಳ್ಳಿ: ನೀರು ಮತ್ತು ನಿರ್ವಹಣೆಯ ಕೊರತೆಯಿಂದಾಗಿ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ನಿರ್ಮಾಣವಾಗಿರುವ ಮಹಿಳಾ ಶೌಚಾಲಯ ನಿರುಪಯುಕ್ತವಾಗಿದೆ. ಶೌಚಾಲಯದ ಮುಂಭಾಗ ತಿಪ್ಪೆಗುಂಡಿ ನಿರ್ಮಾಣವಾಗಿದ್ದು, ಮಹಿಳಾ ಶೌಚಾಲಯ ತಿಪ್ಪೆ ಹಿಂದೆ ಮರೆಯಾಗಿದೆ.ಬಯಲು ಶೌಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ 2005–06ರಲ್ಲಿ ಆಗಿನ ಸಂಸದ ಕರುಣಾಕರ ರೆಡ್ಡಿ ಅವರ ರೂ.2.40 ಲಕ್ಷ  ಅನುದಾನದಲ್ಲಿ ನಿರ್ಮಿಸಲಾದ ಮಹಿಳಾ ಶೌಚಾಲಯ ಅತಂತ್ರಗೊಂಡ ಪರಿಣಾಮವಾಗಿ ಗ್ರಾಮದ ಮಧ್ಯದಲ್ಲಿರುವ ಸುತ್ತಲೂ ಆವರಣ ಗೋಡೆ ಹೊಂದಿರುವ ಕೋಟೆ ಎಂಬ ಬಯಲು ಪ್ರದೇಶವೇ ಮಹಿಳೆ ಯರ ಬಹಿರ್ದೆಸೆಯ ತಾಣವಾಗಿ ಬದಲಾಗಿದೆ.ಗ್ರಾಮದ ಮಧ್ಯಭಾಗದಲ್ಲಿರುವ ಈ ಪ್ರದೇಶ ಶೌಚವಾಗಿ ಬದಲಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಸುತ್ತಲಿನ ಪರಿಸರ ಮಲಿನಗೊಂಡಿದೆ. ಮಳೆಗಾಲ ದಲ್ಲಿ ಕೋಟೆ ಸುತ್ತಲಿನ ಮಲಿನ ಪರಿಸರದಲ್ಲಿ ಜೀವಿಸುವವರ ಜೀವನ ಅಕ್ಷರಶಃ ನರಕವಾಗಿದೆ ಎಂದು ಉಪ ನ್ಯಾಸಕ ಅಂಬಳಿ ವೀರಣ್ಣ ದೂರುತ್ತಾರೆ.ಈ ಹಿಂದೆ ತಾ.ಪಂ.ಕಾರ್ಯ ನಿರ್ವಾ ಹಕ ಅಧಿಕಾರಿ ಜಿ.ಗೋಪ್ಯಾನಾಯ್ಕ ಅವರಿಗೆ ಕೋಟೆ ಸುತ್ತಲಿನ ಜನತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಿಳಾ ಶೌಚಾಲಯಕ್ಕೆ  ಪೂರಕ ನೀರನ್ನು ಒದಗಿಸಿ ವಿದ್ಯುತ್‌ ಸೌಲಭ್ಯ ಕಲ್ಪಿಸಿದರು. ಆದರೆ, ಗ್ರಾಮಸ್ಥರು ಶೌಚಾಲಯ ಮುಂಭಾಗ ತಿಪ್ಪೆ ಸಂಗ್ರಹ ಮಾಡಿದ್ದ ರಿಂದ ಕ್ರಿಮಿಕೀಟಗಳ ಕಾಟ ವಿಪರೀತ ವಾಗಿ ಮಹಿಳೆಯರು ಶೌಚಾಲಯ ಉಪಯೋಗಿಸಲು ಹಿಂದೇಟು ಹಾಕಿದರು ಎಂದು ಗ್ರಾಮದ ಮೈಲಾರೆಮ್ಮ, ಸಣ್ಣ ನಿಂಗಮ್ಮ, ಕಾಶೆಮ್ಮ ಮತ್ತಿತರರು ಹೇಳುತ್ತಾರೆ.ಗ್ರಾಮದಲ್ಲಿ ಕೂಲಿಕಾರ ಮಹಿಳೆಯರೇ ಹೆಚ್ಚಾಗಿ ವಾಸಿಸುತ್ತಿದ್ದು, ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಕೂಡ ಅಸಮರ್ಪಕವಾಗಿ ಅನುಷ್ಠಾನ ಗೊಂಡ ಹಿನ್ನೆಲೆಯಲ್ಲಿ ಕೂಡಲೆ ಗ್ರಾಮಾಡಳಿತ ಶೌಚಾಲಯದ ಮುಂದಿರುವ ತಿಪ್ಪೆ ತೆರವುಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಮಹಿಳೆಯರ ನೆರವಿಗೆ ಧಾವಿಸಬೇಕು ಎಂದು ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ.ದೂರು ಕುರಿತಂತೆ ಗ್ರಾ.ಪಂ. ಅಧ್ಯಕ್ಷ ನಾಗರಾಜ್‌ ಅವರನ್ನು ಸಂಪರ್ಕಿಸಿ ದಾಗ, ಶೌಚಾಲಯ ಗ್ರಾಮ ದಿಂದ ದೂರವಿದೆ ಎಂಬ ಕಾರಣಕ್ಕೆ ಶೌಚಾ ಲಯದ ಸಮರ್ಪಕ ಬಳಕೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry