ಭಾನುವಾರ, ಜನವರಿ 19, 2020
27 °C

ತಿಪ್ಪೇರುದ್ರಸ್ವಾಮಿ ಅದ್ದೂರಿ ಕಾರ್ತೀಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪ್ಪೇರುದ್ರಸ್ವಾಮಿ ಅದ್ದೂರಿ ಕಾರ್ತೀಕೋತ್ಸವ

ನಾಯಕನಹಟ್ಟಿ: ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ಕಾರ್ತೀಕೋತ್ಸವ ಶುಕ್ರವಾರ ಸಡಗರದಿಂದ ಜರುಗಿತು. ಮಧ್ಯಾಹ್ನ 3ಕ್ಕೆ ಒಳಮಠದ ಮುಂಭಾಗದಲ್ಲಿ ವಿವಿಧ ಪಟಗಳು, ಹೂವಿನಿಂದ ಅಲಂಕರಿಸಿದ ರಥದಲ್ಲಿ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನಿಡಲಾಯಿತು.ಒಳಮಠದ ಬಲಭಾಗದಿಂದ ರಥವನ್ನು ಆಂಜನೇಯ ದೇವಸ್ಥಾನದ ರಸ್ತೆ ಮೂಲಕ ಮತ್ತೆ ಒಳಮಠಕ್ಕೆ ಎಳೆದು ಗುಡಿತುಂಬಿಸಲಾಯಿತು. ಅಲಂಕರಿಸಿದ ಬಸವನನ್ನು ರಥದ ಮುಂಭಾಗ ಕರೆದೊಯ್ಯಲಾಯಿತು. ಕರಡಿ ಮಜಲು, ನಂದಿಧ್ವಜ ಕುಣಿತ ಮುಂತಾದ ಜಾನಪದ ಪ್ರಾಕಾರಗಳು  ರಥೋತ್ಸವಕ್ಕೆ ಮೆರಗು ನೀಡಿದ್ದವು. ರಥಕ್ಕೆ ಮಹಿಳೆಯರು, ಮಕ್ಕಳು ಹಣ್ಣು, ಕಾಯಿ ಸಮರ್ಪಿಸಿದರು. ಚೂರು ಬೆಲ್ಲ ಮೆಣಸನ್ನು ರಥಕ್ಕೆ ತೂರಿ ಹರಕೆ ಸಲ್ಲಿಸಿದರು. ಉತ್ಸವದಲ್ಲಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ, ದೇವಸ್ಥಾನ ಸಮಿತಿ ಅಧ್ಯಕ್ಷ ಎಂವೈಟಿ ಸ್ವಾಮಿ ಮತ್ತು ಸದಸ್ಯರು, ಕೆಪಿಸಿಸಿ ಸದಸ್ಯ ಬಾಲರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದರು.ವಿಶೇಷತೆ: ಕಳೆದ ವಾರ ನಡೆದ ಚಿಕ್ಕ ಕಾರ್ತೀಕೋತ್ಸವವನ್ನು ನಾಯಕನಹಟ್ಟಿಯವರು ಆಚರಿಸಿದರೆ ದೊಡ್ಡ ಕಾರ್ತೀಕೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೇ, ಬೇರೆ ಊರಿನಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ಉತ್ಸವದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಪ್ರತಿಕ್ರಿಯಿಸಿ (+)