ತಿಮಿಂಗಿಲಗಳ ಸಾಮೂಹಿಕ ಸಾವು

7

ತಿಮಿಂಗಿಲಗಳ ಸಾಮೂಹಿಕ ಸಾವು

Published:
Updated:
ತಿಮಿಂಗಿಲಗಳ ಸಾಮೂಹಿಕ ಸಾವು

ವೆಲಿಂಗ್ಟನ್ (ಎಎಫ್‌ಪಿ): ನ್ಯೂಜಿಲೆಂಡ್‌ನ ಕಡಲ ತೀರವೊಂದರಲ್ಲಿ 107 ಪೈಲಟ್ ತಿಮಿಂಗಿಲಗಳು ಸಾಮೂಹಿಕವಾಗಿ ಸಾವಿಗೀಡಾಗಿವೆ.

ಸೌತ್ ಐಲ್ಯಾಂಡ್‌ನ ನೈರುತ್ಯ ಭಾಗದ ಸ್ಟೀವರ್ಟ್ ದ್ವೀಪದಲ್ಲಿ ಇದು ಕಂಡುಬಂದಿದೆ ಎಂದು ಸಂತತಿ ಸಂರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

20 ಅಡಿ ಉದ್ದದ ಪೈಲಟ್ ತಿಮಿಂಗಿಲಗಳು ನ್ಯೂಜಿಲೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಇತ್ತೀಚಿನ ದಿನಗಳಲ್ಲಿ ಅವುಗಳ ಸಾಮೂಹಿಕ ಸಾವು ಪದೇ ಪದೇ ಸಂಭವಿಸುತ್ತಿದೆ.

ಈ ತಿಂಗಳ ಆರಂಭದಲ್ಲಿ ಸೌತ್ ಐಲ್ಯಾಂಡ್‌ನ  ಪ್ರವಾಸಿ ತಾಣವಾದ ನೆಲ್ಸನ್‌ನಲ್ಲಿ 14 ತಿಮಿಂಗಿಲಗಳು ಸಾವಿಗೀಡಾಗಿದ್ದವು. ಕಳೆದ ತಿಂಗಳು ರಾಷ್ಟ್ರದ ಉತ್ತರ ಭಾಗದ ಕೇಪ್ ರೀಂಗಾ ಸಮುದ್ರ ತೀರದಲ್ಲಿ 24 ತಿಮಿಂಗಿಲಗಳು ಸತ್ತಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry