ತಿಮ್ಮಪ್ಪನಿಗೆ 3ಕೆ.ಜಿ. ಚಿನ್ನ ಅರ್ಪಿಸಿದ ವಿಜಯ ಮಲ್ಯ

7

ತಿಮ್ಮಪ್ಪನಿಗೆ 3ಕೆ.ಜಿ. ಚಿನ್ನ ಅರ್ಪಿಸಿದ ವಿಜಯ ಮಲ್ಯ

Published:
Updated:
ತಿಮ್ಮಪ್ಪನಿಗೆ 3ಕೆ.ಜಿ. ಚಿನ್ನ ಅರ್ಪಿಸಿದ ವಿಜಯ ಮಲ್ಯ

ಹೈದರಾಬಾದ್: ರಾಜ್ಯಸಭಾ ಸದಸ್ಯ, ಉದ್ಯಮಿ ವಿಜಯ ಮಲ್ಯ ತಿರುಪತಿ ತಿಮ್ಮಪ್ಪನಿಗೆ ಮೂರು ಕೆ.ಜಿ. ಚಿನ್ನ ಅರ್ಪಿಸಿದ್ದಾರೆ. ತಮ್ಮ 58ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 22 ಜನ ಕುಟುಂಬ ಸದಸ್ಯರೊಂದಿಗೆ ಮಂಗಳವಾರ ತಿರುಮಲಕ್ಕೆ ಭೇಟಿ ನೀಡಿದ ಮಲ್ಯ, ಬೆಳಗಿನ ದರ್ಶನದ ಅವಧಿಯಲ್ಲಿ ಈ ಕಾಣಿಕೆಯನ್ನು ಅರ್ಪಿಸಿದರು.ದೇಗುಲಕ್ಕೆ ಚಿನ್ನದ ಬಾಗಿಲು ನಿರ್ಮಿಸುವ ಯೋಜನೆ ಇದ್ದು ಮಲ್ಯ ಅರ್ಪಿಸಿದ ಚಿನ್ನವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಮಲ್ಯ ಈ ಕಾರ್ಯಕ್ಕೆ 8 ಕೆ.ಜಿ. ಚಿನ್ನ ನೀಡಿದ್ದಾರೆ. ಹೀಗಾಗಿ ಮಲ್ಯ ಅವರು ವೆಂಕಟರಮಣನಿಗೆ ಅರ್ಪಿಸಿದ ಒಟ್ಟು ಚಿನ್ನದ ಮೊತ್ತ11 ಕೆ.ಜಿ. ಎದು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿಟಿ) ಅಧಿಕಾರಿ ಸಿ.ರಮಣ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry