ಸೋಮವಾರ, ಮೇ 17, 2021
28 °C

ತಿರುಪತಿಗೆ ಹೋಗುತ್ತಿದ್ದ ಬಸ್ ಅಪಘಾತ: ಎಂಜಿನಿಯರ್ ಸೇರಿ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು:  ಕುರುಬರಹಳ್ಳಿಯ ವಡ್ಡನತೋಟ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ ಬೆಳಗಿನ ಒಂದು ಗಂಟೆ ಸುಮಾರಿಗೆ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯ `ಗರುಡ' ಬಸ್ ಮತ್ತು ಕಂಟೇನರ್ ವಾಹನ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮೃತಪಟ್ಟು, 21 ಮಂದಿ ಗಾಯಗೊಂಡಿದ್ದಾರೆ. ಎರಡೂ ವಾಹನಗಳು ಭಾಗಶಃ ಸುಟ್ಟು ಕರಕಲಾಗಿವೆ.ಮೃತಪಟ್ಟವರನ್ನು ಬಸ್‌ನಲ್ಲಿದ್ದ ಬೆಂಗಳೂರಿನ ಟಿಸಿಎಸ್ ಸಂಸ್ಥೆ ಎಂಜಿನಿಯರ್ ಪದ್ಮಪ್ರಿಯಾ (24), ಬಸ್‌ನ ನಿರ್ವಾಹಕ ಶ್ರೀನಿವಾಸ ಎಂದು ಗುರುತಿಸಲಾಗಿದೆ. ಕಂಟೇನರ್‌ನಲ್ಲಿ ಒಬ್ಬ ಸುಟ್ಟು ಕರಲಾಗಿದ್ದು, ಗುರುತು ಪತ್ತೆಯಾಗಿಲ್ಲ.ಗಾಯಾಳುಗಳಲ್ಲಿ ಕೆಲವರಿಗೆ ಮುಳಬಾಗಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಮತ್ತೆ ಕೆಲವರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾದರು. ಯಾರಿಗೂ ಗಂಭೀರ  ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‌ಬೆಂಗಳೂರಿನಿಂದ ತಿರುಪತಿಗೆ, ಕಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಚೆನ್ನೈನಿಂದ ಬೆಂಗ ಳೂರಿನತ್ತ ಹೋಗುತ್ತಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.