ಗುರುವಾರ , ನವೆಂಬರ್ 21, 2019
20 °C

ತಿರುಮಲಸ್ವಾಮಿಯ ಬ್ರಹ್ಮಮಹೋತ್ಸವ

Published:
Updated:

ವೈಟ್‌ಫೀಲ್ಡ್: ರಾಮನವಮಿ ಪ್ರಯುಕ್ತ ಇಲ್ಲಿಗೆ ಸಮೀಪದ ಸರ್ಜಾಪುರ ರಸ್ತೆಯ ದೊಡ್ಡಕನ್ನಲ್ಲಿ ಮತ್ತು ಕೈಕೊಂಡ್ರಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ನಡೆಯಿತು.ದೊಡ್ಡಕನ್ನಲ್ಲಿಯ ತಿರುಮಲಸ್ವಾಮಿಯ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ಸುತ್ತಮುತ್ತಲ ಗ್ರಾಮದ ನೂರಾರು ಗ್ರಾಮಸ್ಥರು ರಥ ಎಳೆದು ಸಂಭ್ರಮಿಸಿದರು. ಇದಕ್ಕೂ ಮುನ್ನ ಶನಿವಾರ ಬೆಳಿಗ್ಗೆ ಸ್ವಾಮಿಗೆ ತಿರುಕಲ್ಯಾಣೋತ್ಸವ ಮಾಡಲಾಯಿತು. ಗಜ, ಹಂಸ, ಅನಂತಶೇಷ, ಅಶ್ವ, ಸಿಂಹ, ಹನುಮ, ಸೂರ್ಯಪ್ರಭ, ಚಂದ್ರಪ್ರಭ ಮತ್ತು ಗರುಡ ವಾಹನೋತ್ಸವದ ಅಲಂಕಾರ ಮಾಡಲಾಗಿತ್ತು.ಕೈಕೊಂಡ್ರಹಳ್ಳಿಯಲ್ಲಿ ಭೂನೀಳಾ ಸಮೇತ ಚನ್ನಕೇಶವ ಸ್ವಾಮಿಯ ಜಾತ್ರೆ ನಡೆಯಿತು. ಶುಕ್ರವಾರ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾ ಯಿತು. ರಾತ್ರಿ ಚನ್ನಕೇಶವ ಸ್ವಾಮಿ ಸೇರಿದಂತೆ 14 ದೇವರ ಪಲ್ಲಕ್ಕಿ ಉತ್ಸವಗಳು ನಡೆದವು.

ಪ್ರತಿಕ್ರಿಯಿಸಿ (+)