ಬುಧವಾರ, ನವೆಂಬರ್ 20, 2019
21 °C

`ತಿರುಮಲ' ಲಾಂಛನ ಬಿಡುಗಡೆ

Published:
Updated:

ಬೆಂಗಳೂರು:  ತಿರುಮಲ ಮಿಲ್ಕ್ ಪ್ರಾಡಕ್ಟ್‌ನ ನೂತನ ಲಾಂಛನ ಬಿಡುಗಡೆ ಹಾಗೂ ಹಾಲಿನ ಉತ್ಪನ್ನಗಳ ಬಿಡುಗಡೆ ನಗರದಲ್ಲಿ ಸೋಮವಾರ ಜರುಗಿತು. ನಟಿ ಶುಭಾ ಪೂಂಜಾ ಲಾಂಛನ ಬಿಡುಗಡೆ ಮಾಡಿದರು.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬ್ರಹ್ಮ ನಾಯ್ಡು, `ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ತಿರುಮಲ ಹಾಲಿನ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ನಿತ್ಯ 1.1 ದಶಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಮಾವು, ಸ್ಟ್ರಾಬೆರಿ, ಬಾಳೆರುಚಿಗಳಲ್ಲಿ ಟೆಟ್ರಾ ಫಿನೋ ತಯಾರಿಸಿದ ಪಶು ಮತ್ತು ಎಮ್ಮೆ ಹಾಲಿನ ಟ್ರಿಂಗೋ ಬಿಡುಗಡೆ ಮಾಡಲಾಗಿದೆ. ಸಂಸ್ಥೆಯ ಹಾಲು ಎಲ್ಲರಿಗೂ ಕೈಗೆಟಕುವ ದರದಲ್ಲಿ ಇದೆ' ಎಂದರು.ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಬ್ರಹ್ಮಾನಂದ, ನಿರ್ದೇಶಕರಾದ ನಾಗೇಶ್ವರ ರಾವ್, ಸತ್ಯನಾರಾಯಣ್ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)