ಮಂಗಳವಾರ, ಜೂನ್ 22, 2021
28 °C

ತಿರುವಿನಲ್ಲಿ ನಿಲ್ಲದ ಅಪಘಾತಗಳು

ಪ್ರಜಾವಾಣಿ ವಾರ್ತೆ/ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಈ ರಸ್ತೆಯಲ್ಲಿ ತಿರುವು ತೆಗೆದು ಕೊಳ್ಳುವ ವೇಳೆ ಉಸಿರು ಬಿಗಿ ಹಿಡಿದುಕೊಳ್ಳಬೇಕು. ಎದುರಿನಿಂದ ಯಾವ ವಾಹನ ಎಷ್ಟು ವೇಗದಲ್ಲಿ ಬರುತ್ತಿದೆ ಎಂದು ತಿಳಿಯುವ ಮೊದಲೇ ಅಪಘಾತದ ಸಾಧ್ಯತೆ. ಒಂದು ವೇಳೆ ಅಪಾಯ ಲೆಕ್ಕಿಸದೇ ಚಾಲನೆ ಮಾಡಿದ್ದಲ್ಲಿ, ಕೋತಿ ಅಥವಾ ಜಾನುವಾರುಗಳು ಬಲಿಯಾಗಬೇಕು.ಇದು ಯಾವುದೇ ಕುಗ್ರಾಮದ ಅಥವಾ ಗಡಿಭಾಗದ ರಸ್ತೆಯಲ್ಲ, ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊರ ವಲಯದಲ್ಲಿನ ಈರದಿಮ್ಮಮ್ಮನ ಕಣಿವೆ ರಸ್ತೆಯ ಸ್ಥಿತಿ. ಜಕ್ಕಮಡಗು, ಗೌರಿಬಿದನೂರು, ಹಿಂದೂಪುರ ಮುಂತಾದ ಕಡೆ ಸಾಗುವ ವಾಹನ ಚಾಲಕರು ಮತ್ತು ಪ್ರಯಾಣಿಕರು ನಿತ್ಯ ಆತಂಕದಲ್ಲೇ ಪ್ರಯಾಣಿಸುತ್ತಾರೆ.

 

ಇದರ ಏರುರಸ್ತೆಯಲ್ಲಂತೂ ಪ್ರಯಾಣಿಕರು ಕೆಳಗಿಳಿದು ನೂಕಿದಾಗಲೇ ಸರ್ಕಾರಿ ಬಸ್ ಮುಂದಕ್ಕೆ ಸಾಗುತ್ತದೆ.

ರಸ್ತೆಯ ತಿರುವುಗಳಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ನಿಶ್ಚಿತ. ಕಾರಣ, ತಿರುವುಗಳ ಬಗ್ಗೆ ಯಾವುದೇ ಸೂಚನಾ ಫಲಕವಾಗಲಿ, ಮಾಹಿತಿ ಕೂಡಾ ಇಲ್ಲವಾಗಿದೆ.ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕು ಗಳ ನಡುವೆ ಪ್ರಮುಖ ಕೊಂಡಿ ಎಂಬಂತಿರುವ ಈರದಿಮ್ಮಮ್ಮನ ಕಣಿವೆ ರಸ್ತೆ ವಿಸ್ತೀರ್ಣ ಕಿರಿದಾಗಿದೆ. ಒಂದು ಬದಿಯಲ್ಲಿ ಎತ್ತರದ ಬೆಟ್ಟಗುಡ್ಡ ಇದ್ದರೆ, ಮತ್ತೊಂದು ಬದಿಯಲ್ಲಿ ಮೂರು ಅಡಿಗಳಷ್ಟು ಎತ್ತ ರದ ತಡೆಗೋಡೆಯಿದೆ. ರಸ್ತೆಯ ತಿರುವಿನಲ್ಲಿ ಏಕ ಕಾಲಕ್ಕೆ ಮುಖಾಮುಖಿಯಾಗಿ ವಾಹನಗಳು ಎದು ರಾದರೆ, ವಾಹನ ಚಾಲಕರು ಕ್ಷಣಕಾಲ ಗೊಂದಲ ಕ್ಕೀಡಾಗದೇ ಇರುವುದಿಲ್ಲ.ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿಗೆ ಹೋಗಲು ಈರದಿಮ್ಮಮ್ಮನ ಕಣಿವೆ ರಸ್ತೆಯು ಇಳಿಜಾರು ಇರು ವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ತಿರುವು ತೆಗೆದುಕೊಳ್ಳುವ ವೇಳೆ ಎದುರಿಗೆ ವಾಹನ ಬಂದರೆ ನಿಯಂತ್ರಣ ಸಾಧಿಸುವುದು ಕಷ್ಟವಾಗುತ್ತದೆ. ದಿಢೀರ್‌ನೇ ಬ್ರೇಕ್ ಹಾಕಲು ಕಷ್ಟಸಾಧ್ಯ. ಎಚ್ಚರ ಕಾಯ್ದುಕೊಳ್ಳದಿದ್ದರೆ, ಅಪಾಯ ಖಚಿತ~ ಎಂದು ಲಾರಿ ಚಾಲಕ ಮಹಮ್ಮದ್ ರಫೀಕ್ `ಪ್ರಜಾವಾಣಿ~ಗೆ ತಿಳಿಸಿದರು.`ರಾತ್ರಿ ವೇಳೆಯಂತೂ ಇನ್ನೂ ಕಷ್ಟ. ವಾಹನ ದಟ್ಟಣೆ ಇರುವುದಿಲ್ಲವೆಂದು ಸರಕು ಸಾಗಣೆ ವಾಹನಗಳು ಮತ್ತು ಲಾರಿಗಳು ಭಾರಿ ಸಂಖ್ಯೆಯಲ್ಲಿ ಸಂಚರಿಸುತ್ತವೆ.  ಸ್ವಲ್ಪ ನಿಯಂತ್ರಣ ಕಳೆದುಕೊಂಡರೂ ಅಪಾಯಕ್ಕೆ ಆಹ್ವಾನ. ರಾತ್ರಿಯಲ್ಲಿ ಕೋತಿಗಳು ಅಲ್ಲದೇ ಬೇರೆ ಬೇರೆ ಪ್ರಾಣಿಗಳು ಓಡಾಡುತ್ತಿರುತ್ತವೆ. ಮೂಕ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲವೇ~ ಎಂದು ಪ್ರಶ್ನಿಸುತ್ತಾರೆ.ಸರಕು ಸಾಗಣೆ ವಾಹನಗಳನ್ನು ಮತ್ತು ಲಾರಿಗಳನ್ನು ಚಾಲನೆ ಮಾಡುವ ಇತರ ಚಾಲಕರು ಕೂಡ ಇದೇ ರೀತಿ ಹೇಳುತ್ತಾರೆ.`ರಸ್ತೆಯಲ್ಲಿ ತಿರುವು ಎಷ್ಟು ದೂರದಲ್ಲಿದೆ ? ಎಲ್ಲಿ ಯವರೆಗೂ ಇದೆ ಎಂಬುದರ ಬಗ್ಗೆ ಎಲ್ಲಿಯೂ ಸೂಚನಾ ಅಥವಾ ಮಾಹಿತಿ ಫಲಕವಿಲ್ಲ.ಸುರಕ್ಷಿತ ವಾಹನ ಸಂಚಾರದ ಕುರಿತು ಎಚ್ಚರಿಕೆ ಫಲಕವೂ ಇಲ್ಲಿ ಕಾಣುವುದಿಲ್ಲ. ಅತಿ ಹೆಚ್ಚು ಕೋತಿಗಳು ಮತ್ತು ಜಾನು ವಾರು ಸಂಚರಿಸುವ ಸ್ಥಳ. ಎಚ್ಚರದಿಂದ ಚಾಲನೆ ಮಾಡಿ~ ಎಂಬ ಮಾಹಿತಿ ಫಲಕವನ್ನೂ ಸಹ ಇಲ್ಲಿ ಅಳ ವಡಿಸಲಾಗಿಲ್ಲ~ ಎಂದು ಅವರು ಆರೋಪಿಸುತ್ತಾರೆ. ಬಸ್‌ನಲ್ಲೇ ಪ್ರಯಾಣಿಸುವ ಪ್ರಯಾಣಿಕರಿಗಂತೂ ಹಲವು ಸಮಸ್ಯೆಗಳು.`ಕಣಿವೆಯ ಏರುರಸ್ತೆ ಆರಂಭಗೊಂಡ ಕೂಡಲೇ ಬಸ್ ವೇಗ ತಗ್ಗುತ್ತದೆ. ಕಡಿದಾದ ತಿರುವಿನಲ್ಲಂತೂ ಮುಂದಕ್ಕೆ ಹೋಗುವುದಿಲ್ಲ. ಆಗ ನಾವು ಬಸ್‌ನಿಂದ ಇಳಿದು ಅದನ್ನು ನೂಕಬೇಕು. ಬಸ್ ಸಾಗದಿದ್ದರೆ, ಕೆಲವೇ ನಿಮಿಷಗಳಲ್ಲಿ ವಾಹನ ದಟ್ಟಣೆ ಆಗುತ್ತದೆ~ ಎನ್ನುತಾರೆ ವಿದ್ಯಾರ್ಥಿ ರವಿಪ್ರಕಾಶ್.`ಈ ರಸ್ತೆ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವೇಗದ ಚಾಲನೆಯಿಂದ ಅಪ ಘಾತಗಳು ಸಹ ಸಂಭವಿಸುತ್ತವೆ. ರಸ್ತೆ ತಿರುವು, ಏರು ರಸ್ತೆ, ಇಳಿಜಾರು ರಸ್ತೆ, ಕೋತಿ-ಜಾನುವಾರು ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿ, ಸೂಚನಾ ಫಲಕ ಅಳವಡಿಸಿದರೆ, ಅನುಕೂಲ ವಾಗು ತ್ತದೆ.ವಾಹನ ಚಾಲಕರು ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮ ತುರ್ತಾಗಿ ಆಗಬೇಕು~ ಎಂದು ವೈದ್ಯ ಡಾ. ರಮೇಶ್ ತಿಳಿಸಿದರು.ನುಜ್ಜುಗುಜ್ಜಾದ ಲಾರಿ: ಕಳೆದ ಸೋಮವಾರ ಈರದಿಮ್ಮಮ್ಮನ ಕಣಿವೆ ರಸ್ತೆಯಲ್ಲಿ ತಡೆಗೋಡೆ ಲಾರಿ ಉರುಳಿಬಿದ್ದಿದೆ. ದುರ್ಘಟನೆಯಲ್ಲಿ ಲಾರಿ ನುಜ್ಜು ಗುಜ್ಜಾಗಿತ್ತು. ಚಾಲಕ ಹಾಗೂ ಕ್ಲೀನರ್ ಇಬ್ಬರು ಸಣ್ಣ ಪುಟ್ಟಗಾಯಗಳಾಗಿ ಪ್ರಾಣಪಾಯದಿಂದ ಪಾರಾ ಗಿದ್ದರು. ಇಂತಹ ಹಲವು ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇದನ್ನು ಸಂಬಂಧಿಸಿದವರು ಗಮನಿ ಸಬೇಕು ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.