ಭಾನುವಾರ, ಏಪ್ರಿಲ್ 11, 2021
22 °C

ತಿವಾರಿ ಡಿಎನ್‌ಎ ಪರೀಕ್ಷೆ ಆದೇಶದಲ್ಲಿ ಮಾರ್ಪಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಾಂಗ್ರೆಸ್‌ನ ಹಿರಿಯ ಮುಖಂಡ ಎನ್. ಡಿ. ತಿವಾರಿ ವಿರುದ್ಧದ ಪಿತೃತ್ವ ವಿವಾದದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ತನ್ನ ಮೊದಲಿನ ಆದೇಶವನ್ನು ಮಾರ್ಪಾಡು ಮಾಡಿ ಸೋಮವಾರ ಹೊಸ ಆದೇಶ ಹೊರಡಿಸಿದೆ.ಹೈಕೋರ್ಟ್ ತನ್ನ ಮೊದಲಿನ ಆದೇಶದಲ್ಲಿ ಹೈದರಾಬಾದ್‌ನ ಸಿಡಿಎಫ್‌ಡಿಯಲ್ಲಿ ತಿವಾರಿ ಅವರ ಡಿಎನ್‌ಎ ಪರೀಕ್ಷೆ ಮಾಡಿಸಲು ಸೂಚಿಸಿತ್ತು. ಆದರೆ ಈ ಸಂಸ್ಥೆ ಈಗ ಡಿಎನ್‌ಎ ಪರೀಕ್ಷೆ ಮಾಡುವುದನ್ನು ನಿಲ್ಲಿಸಿರುವುದರಿಂದ ಹೈದರಾಬಾದ್‌ನ ಸಿಸಿಎಂಬಿ ಪ್ರಯೋಗಾಲಯದಲ್ಲಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸುವಂತೆ ಹೊಸ ಆದೇಶ ಹೊರಡಿಸಬೇಕು ಅರ್ಜಿದಾರ ರೋಹಿತ್ ಶೇಖರ್ ಕೋರಿದ್ದರು. ತಿವಾರಿ ಅವರ ರಕ್ತದ ನಮೂನೆ ಪಡೆಯುವ ವಿಧಾನವನ್ನು ಜಂಟಿ ರಿಜಿಸ್ಟ್ರಾರ್ ಏಪ್ರಿಲ್ 4ರಂದು ನಿರ್ಧರಿಸಬೇಕು ಎಂದು ನ್ಯಾಯರ್ಮೂ ಮಿತ್ತಲ್ ಆದೇಶಿಸಿದ್ದಾರೆ.ತಡೆಯಾಜ್ಞೆಗೆ ನಕಾರ: ಈ ನಡುವೆ, ಡಿಎನ್‌ಎ ಪರೀಕ್ಷೆಗೆ ಒಳಗಾಗಬೇಕು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ತಿವಾರಿ  ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಫ್ತಾಬ್ ಅಲಂ ಹಾಗೂ ಆರ್.ಎಂ. ಲೋಧಾ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿತು.ಡಿಎನ್‌ಎ ಪರೀಕ್ಷೆಯ ಫಲಿತಾಂಶ ವನ್ನು ಮುಚ್ಚಿದ ಲಕೋಟೆಯಲ್ಲಿ ನೀಡ ಬೇಕು. ಒಂದು ವೇಳೆ ಅದನ್ನು ಸಾರ್ವ ಜನಿಕವಾಗಿ ಬಹಿರಂಗೊಳಿಸುವ ಅಗತ್ಯ ಬಿದ್ದರೆ ಆ ವಿಷಯವನ್ನು ಅಂತಿಮವಾಗಿ ಕೋರ್ಟ್ ನಿರ್ಧಾರಕ್ಕೇ ಬಿಡಬೇಕು ಎಂದು ಪೀಠವು ಅಭಿಪ್ರಾಯಪಟ್ಟಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.