ಗುರುವಾರ , ಮೇ 28, 2020
27 °C

ತೀನಂಶ್ರೀ ಭವನ ಕಳಪೆ ಕಾಮಗಾರಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ:  ನಗರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ತೀನಂಶ್ರೀ ಭವನದ ಕಾಮಗಾರಿ ಕಳಪೆ ಎಂದು ಪುರಸಭಾ ಸದಸ್ಯ ಸಿ.ಡಿ. ಚಂದ್ರಶೇಖರ್ ಆರೋಪಿಸಿದರು.ಈಚೆಗೆ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪುರಸಭೆಗೆ ಸೇರಿದ ಸಂತೆ ಜಾಗವನ್ನು ಭವನ ನಿರ್ಮಿಸಲು ಬಿಟ್ಟುಕೊಡ ಲಾಗಿದೆ.ಭವನಕ್ಕಾಗಿ ರೂ. 4 ಕೋಟಿ ಅನುದಾನ ನೀಡಲಾಗಿದೆ. ಆದರೆ ಕಾಮಗಾರಿಯಲ್ಲಿ ಕಳಪೆ ಮಟ್ಟದ ಮರಳು ಮತ್ತು ವಸ್ತುಗಳನ್ನು ಬಳಸಲಾಗು ತ್ತಿದೆ. ಪ್ರಮಾಣ ಬದ್ಧವಾದ ಸಿಮೆಂಟ್ ಹಾಕದ ಕಾರಣ ಪಿಲ್ಲರ್ ಬೆಳ್ಳಗಾಗಿವೆ. ಎಂಜಿನಿಯರ್ ಈವರೆಗೂ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು. ನಗರದ ವಿವಿಧೆಡೆ ಪುರಸಭಾ ಆಸ್ತಿಗಳನ್ನು ಈವರೆಗೂ ಖಾತೆ ಮಾಡಿಸದೆ ನಿರ್ಲ್ಯಕ್ಷಿಸಲಾಗಿದೆ. ರೂ. 20 ಲಕ್ಷದ ಕೆರೆ ಭಾಗಕ್ಕೆ ತಡೆಗೋಡೆ ನಿರ್ಮಾಣದ ಕೆಲಸ ಆಗಿಲ್ಲವೆಂದು ಸಿ.ಪಿ. ಮಹೇಶ್ ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.