ತೀನ್ ಪ್ರಹಾರ್

7

ತೀನ್ ಪ್ರಹಾರ್

Published:
Updated:

ಬನ್ಯಾನ್ ಟ್ರೀ ಇವೆಂಟ್ಸ್ ಮತ್ತು ಬಿರ್ಲಾ ಸನ್‌ಲೈಫ್ ಇನ್ಶೂರನ್ಸ್ ಶನಿವಾರ ಸಂಜೆ 4.30ಕ್ಕೆ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ‘ತೀನ್ ಪ್ರಹಾರ್’ ಎಂಬ ವಿಶಿಷ್ಟ ಸಂಗೀತ ಅನುಭವವನ್ನು ಪ್ರಸ್ತುತಪಡಿಸಲಿದೆ.ಇದರಲ್ಲಿ ಸಂಗೀತಲೋಕದ ದಿಗ್ಗಜರು, ಉದಯಿಸುತ್ತಿರುವ ಪ್ರತಿಭೆಗಳು ಭಾಗವಹಿಸಲಿರುವುದು ವಿಶೇಷ. ಸಾಮಾನ್ಯವಾಗಿ ಕಛೇರಿಗಳಲ್ಲಿ ಕೇಳಿರದ ರಾಗಗಳು ಮೇಳದ ಭಾಗವಾಗಿ, ಜುಗಲ್‌ಬಂದಿಯಾಗಿ ಏಕವ್ಯಕ್ತಿ ಪ್ರದರ್ಶನವಾಗಿ ಕೇಳಿಬರಲಿವೆ. ಇಲ್ಲಿ ಶೌನಕ್ ಅಭಿಶೇಕಿ (ಗಾಯನ), ಜಯಂತಿ ಕುಮರೇಶ್ (ವೀಣೆ) ಜತೆ ರೋಣು ಮಜುಂದಾರ್ (ಕೊಳಲು), ಅನುಬ್ರತಾ ಚಟರ್ಜಿ ಅವರ ತಬಲಾ ವಾದನ, ಜನಪದ ಮತ್ತು ಶಾಸ್ತ್ರೀಯ ವಾದನಗಳ ತಾಳ ಮೇಳ ‘ತಾಲ್ ಇಂಡಿಯ’, ವಿಕ್ರಮ್ ಘೋಷ್ (ತಬಲಾ ಮತ್ತು ಇತರ ವಾದ್ಯ), ರಾಹುಲ್ ಶರ್ಮ (ಸಂತೂರ್ ವಾದನ) ಕೇಳಬಹುದು.ದೇಣಿಗೆ ಕಾರ್ಡುಗಳು ಕೋರಮಂಗಲದ ಲ್ಯಾಂಡ್‌ಮಾರ್ಕ್ (4240 4240), ಇಂದಿರಾನಗರದ ಓಡಿಸ್ಸಿ (4211 5341) ಹಾಗೂ ಸೆಂಟ್ ಮಾರ್ಕ್ಸ್ ರಸ್ತೆಯ ಕೆ.ಸಿ. ದಾಸ್ ಮಳಿಗೆಯಲ್ಲಿ(2559 2021) ದೊರೆಯುತ್ತವೆ. ಆನ್‌ಲೈನ್ ಬುಕಿಂಗ್‌ಗೆ:
www.indianstage.in.  ಮನೆಗೇ ಟಿಕೆಟ್ ತರಿಸಿಕೊಳ್ಳಲು: 98800 36611.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry