ತೀರ್ಥಹಳ್ಳಿ ತಾ.ಪಂ. ಕಾಂಗ್ರೆಸ್ ಪಾಲಿಗೆ

7

ತೀರ್ಥಹಳ್ಳಿ ತಾ.ಪಂ. ಕಾಂಗ್ರೆಸ್ ಪಾಲಿಗೆ

Published:
Updated:

ತೀರ್ಥಹಳ್ಳಿ: ಇಲ್ಲಿನ ತಾಲ್ಲೂಕು ಪಂಚಾಯ್ತಿ ಅಧಿಕಾರ ಕಾಂಗ್ರೆಸ್‌ನ ಮಹಿಳಾ ಅಭ್ಯರ್ಥಿಗಳ ಪಾಲಾಗಿದ್ದು, ಅಧ್ಯಕ್ಷೆಯಾಗಿ ಮೀನಾಕ್ಷಿ ರಾಮಪ್ಪ ಹಾಗೂ ಉಪಾಧ್ಯಕ್ಷೆಯಾಗಿ ಜೀನಾ ವಿಕ್ಟರ್ ಡಿಸೋಜ ಅವಿರೋಧವಾಗಿ ಗುರುವಾರ ಆಯ್ಕೆಗೊಂಡರು.ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು. ಮಾಳೂರು ತಾ.ಪಂ. ಬಿಸಿಎಂ ‘ಎ’ ಮಹಿಳಾ ಮೀಸಲು ಕ್ಷೇತ್ರದಿಂದ ಮೀನಾಕ್ಷಿ ರಾಮಪ್ಪ, ಹೊದಲ-ಅರಳಾಪುರ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಜೀನಾ ವಿಕ್ಟರ್ ಡಿಸೋಜ ಕಾಂಗ್ರೆಸ್‌ನಿಂದ ಆಯ್ಕೆಗೊಂಡಿದ್ದರು.  ತಾಲ್ಲೂಕು ಪಂಚಾಯ್ತಿಯ 13 ಸ್ಥಾನಗಳಲ್ಲಿ ಕಾಂಗ್ರೆಸ್ 9 ಸ್ಥಾನಗಳಿಸಿ, ಹೆಚ್ಚುಗಾರಿಕೆ ಮೆರೆದಿತ್ತು. ಬಿಜೆಪಿ 4 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳುವಂತಾಗಿತ್ತು. ಕಳೆದ ಬಾರಿ ತಾಲ್ಲೂಕು ಪಂಚಾಯ್ತಿ ಆಡಳಿತವನ್ನು ಬಹುಮತದೊಂದಿಗೆ ಬಿಜೆಪಿ ತನ್ನದಾಗಿಸಿಕೊಂಡಿತ್ತು.ಬಿಸಿಎಂ ‘ಎ’ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಾಗಿದ್ದರಿಂದ ಮಂಡಗದ್ದೆ ಕ್ಷೇತ್ರದಿಂದ ಆಯ್ಕೆಯಾದ ಕುಸುಮಾ ಕೃಷ್ಣಮೂರ್ತಿ ಹಾಗೂ ಮಾಳೂರು ಕ್ಷೇತ್ರದಿಂದ ಆಯ್ಕೆಯಾದ ಮೀನಾಕ್ಷಿ ರಾಮಪ್ಪ ಅವರ ನಡುವೆ ಪೈಪೋಟಿ ಏರ್ಪಟ್ಟಿತ್ತು.ಇಬ್ಬರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವುದರಿಂದ ತಲಾ 10 ತಿಂಗಳ ಅವಧಿಗೆ ಅಧ್ಯಕ್ಷರಾಗುವಂತೆ ಸೂಚಿಸಲಾಗಿ ತ್ತಾದರೂ, ಮೊದಲ ಅವಧಿಗೆ ಯಾರೆಂಬುದನ್ನು ನಿಗದಿಗೊಳಿಸಲು ಲಾಟರಿ ಮೂಲಕ ಆಯ್ಕೆ ನಡೆಸಲಾಯಿತು. ಈ ಆಯ್ಕೆಯಲ್ಲಿ ಮೀನಾಕ್ಷಿ ರಾಮಪ್ಪ ಅವರ ಪಾಲಿಗೆ ಅದೃಷ್ಟ ಒಲಿದಿದೆ.ಚುನಾವಣಾ ಪ್ರಕ್ರಿಯೆಯನ್ನು ಉಪ ವಿಭಾಗಾಧಿಕಾರಿ ವೈಶಾಲಿ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ವಿ.ಕೆ. ಮಂಜುನಾಥ್ ನಡೆಸಿ ಅಧ್ಯಕ್ಷ ಹಾಗೂಉಪಾಧ್ಯಕ್ಷರ ಆಯ್ಕೆ ಪ್ರಕಟಿಸಿದರು.ಕಾಂಗ್ರೆಸ್‌ನಲ್ಲಿ ಮೊದಲ ಅವಧಿಯ ಅಧ್ಯಕ್ಷರು ಯಾರಾಗಬೇಕು ಎಂಬ ಗೊಂದಲ ನಿರ್ಮಾಣವಾದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಮುಖಂಡರು ಸಭೆನಡೆಸಿ, ಲಾಟರಿ ಎತ್ತುವ ಮೂಲಕ ಅಭ್ಯರ್ಥಿಯ ಆಯ್ಕೆ ನಡೆಸಿ ಅಂತಿಮಗೊಳಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್, ಶಾಸಕ ಕಿಮ್ಮನೆ ರತ್ನಾಕರ್, ಕೆಸ್ತೂರ್ ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry