ತೀರ್ಪು ಬರುವ ಮುನ್ನ...ಬೇಗನೇ ಎದ್ದ, ಕುರಾನ್ ಓದಿದ...

7

ತೀರ್ಪು ಬರುವ ಮುನ್ನ...ಬೇಗನೇ ಎದ್ದ, ಕುರಾನ್ ಓದಿದ...

Published:
Updated:ಮುಂಬೈ (ಪಿಟಿಐ): ಜೈಲಿನ ಕೋಣೆಯಲ್ಲಿ ಮಲಗಿದ್ದ ಕಸಾಬ್ ಬೆಳಿಗ್ಗೆ ಬೇಗನೇ ಎದ್ದ. ಪ್ರಾರ್ಥನೆ ಸಲ್ಲಿಸಿದ. ಪವಿತ್ರ ಕುರಾನ್ ಗ್ರಂಥದ ಕೆಲವು ಸಾಲುಗಳನ್ನು ಪಠಣ ಮಾಡಿದ. ನಂತರ ಕೋರ್ಟಿನ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮುಖಾಂತರ ಎದುರಿಸಲು ಸಜ್ಜಗೊಂಡ...ಸೋಮವಾರ ಮುಂಬೈನ ಆರ್ಥರ್ ಜೈಲಿನಲ್ಲಿ ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಾಬ್ ದಿನಚರಿ ಆರಂಭವಾಗಿದ್ದು ಈ ರೀತಿ ಎಂದು ಜೈಲಿನ ಅಧಿಕಾರಿಗಳು ಸುದ್ದಿಸಂಸ್ಥೆಗೆ ವಿವರಿಸಿದ್ದಾರೆ.ಕುಗ್ಗಿಹೋಗಿದ್ದ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್ ನಿವಾಸಿಯಾದ 24 ವರ್ಷದ ಕಸಾಬ್ ‘ತೀರ್ಪು ಕೇಳುವ ಮುನ್ನ ಸಾಕಷ್ಟು ಕುಗ್ಗಿಹೋಗಿದ್ದ. ಯಾರೊಂದಿಗೂ ಹೆಚ್ಚು ಮಾತನಾಡಲಿಲ್ಲ’ ಎಂದು ಕಸಾಬ್ ಪರ ವಕೀಲೆ ಫರ್ಹಾನ್ ಷಾ ತಿಳಿಸಿದ್ದಾರೆ.ಭದ್ರತೆ: ಬಾಂಬೆ ಹೈಕೋರ್ಟಿನ ಸುತ್ತಲೂ ಸೋಮವಾರ ಬಿಗಿಭದ್ರತೆ ಏರ್ಪಡಿಸಲಾಗಿತ್ತು. ವಿಶೇಷ ಪೊಲೀಸ್ ವಿಭಾಗದಿಂದ ಪತ್ರಕರ್ತರಿಗೆ ಕೋರ್ಟಿನ ಒಳ ಪ್ರವೇಶಿಸಲು ಪಾಸ್‌ಗಳನ್ನು ವಿತರಿಸಲಾಗಿತ್ತು. ಕೇವಲ 49 ಪತ್ರಕರ್ತರನ್ನು ಮಾತ್ರ ಒಳಗೆ ಬಿಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry