ಬುಧವಾರ, ಅಕ್ಟೋಬರ್ 16, 2019
21 °C

ತೀವ್ರ ಚಳಿ: 7 ಸಾವು

Published:
Updated:

ನವದೆಹಲಿ (ಪಿಟಿಐ): ಉತ್ತರ ಭಾರತದಲ್ಲಿ ತೀವ್ರವಾಗಿ ಬೀಸುತ್ತಿರುವ ಚಳಿ ಗಾಳಿಗೆ ಏಳು ಜನ ಮೃತಪಟ್ಟಿದ್ದಾರೆ. ಈ ಮೂಲಕ ಹವಾಮಾನ ವೈಪರೀತ್ಯದಿಂದ ಸತ್ತವರ ಸಂಖ್ಯೆ 142ಕ್ಕೇರಿದೆ.

ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಉತ್ತರಪ್ರದೇಶದ ಮಹರ್‌ಜಂಗ್ ಜಿಲ್ಲೆಯಲ್ಲಿ ಸಾವನ್ನಪ್ಪ್ದ್ದಿದರೆ, ಚಂಬಾದಲ್ಲಿ ಉಂಟಾದ ಹಿಮಪಾತಕ್ಕೆ ಮೂವರು ಮೃತರಾಗಿದ್ದಾರೆ. ತೀವ್ರ ಮಂಜಿನಿಂದ ಮನೆಗಳು ಕುಸಿದಿವೆ.

ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಬಿಸಿಲು ಬಿದ್ದಿದ್ದರೂ ಮೈನಡುಗಿಸುವ ಚಳಿ ಮುಂದುವರಿದಿದ್ದು, ಈವರೆಗೆ 3 ಜನ ಮೃತರಾಗಿದ್ದಾರೆ.

ಶಿಮ್ಲಾದಲ್ಲಿಯೂ -1.8 ಯಿಂದ -2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿತ್ತು. ಪ್ರವಾಸಿಗರ ನೆಚ್ಚಿನ ತಾಣ ಮನಾಲಿಯಲ್ಲಿ 10ಸೆ.ಮೀ ನಿಂದ 20 ಸೆ.ಮೀನಷ್ಟು ಮಂಜು ಬಿದ್ದಿದೆ.

ಶ್ರೀನಗರ  ವರದಿ (ಐಎಎನ್‌ಎಸ್): ನಾಲ್ಕು ದಿನದಿಂದ ಕಾಶ್ಮೀರದಲ್ಲಿ ಕುಸಿದಿರುವ ಉಷ್ಣಾಂಶ ಪ್ರಮಾಣ ಗುರುವಾರ ಬೆಳಿಗ್ಗೆ -3.8 ಡಿಗ್ರಿ ಸೆಲ್ಸಿಯಸ್‌ನಷ್ಟಾಗಿದೆ. ಇದರಿಂದ ಹಲವು ಕಡೆದಲ್ ಸರೋವರ ಮಂಜುಗಟ್ಟಿದ್ದು, ದೋಣಿ ಸಂಚಾರ ಸ್ಥಗಿತಗೊಂಡಿದೆ.

Post Comments (+)