ಶನಿವಾರ, ಜೂನ್ 12, 2021
28 °C

ತೀವ್ರ ನಿಗಾ ಘಟಕದಲ್ಲಿ ಸರ್ಕಾರ: ಪೂಜಾರಿ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೀವ್ರ ನಿಗಾಘಟಕದಲ್ಲಿದ್ದಂತೆ ಇದೆ. ಅದರ ಆರೋಗ್ಯ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಅದರ ಭವಿಷ್ಯ ಡೋಲಾಯಮಾನವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ವ್ಯಂಗ್ಯವಾಡಿದರು.ಸೋಮವಾರ ಕಾಂಗ್ರೆಸ್ ಪ್ರಚಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ `ವೆಂಟಿಲೇಟರ್~ ಇದ್ದಂತೆ. ಆ ವೆಂಟಿಲೇಟರ್ ಅತ್ತಿತ್ತ ಅಲುಗಾಡಿದರೆ ಸರ್ಕಾರ ಕುಸಿಯುವುದು ನಿಶ್ಚಿತ ಎಂದು ಹೇಳಿದರು.ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ನಡೆಸಿರುವ ಹುಟ್ಟುಹಬ್ಬದ ಸಮಾ ವೇಶಕ್ಕೆ ಹಣಕ್ಕೊಟ್ಟು ಜನರನ್ನು ಕರೆಸಿಕೊಂಡಿದ್ದಾರೆ. ಅದು ಹುಟ್ಟುಹಬ್ಬ ಸಮಾವೇಶವಲ್ಲ, ಯಡಿಯೂರಪ್ಪ ಶಕ್ತಿ ಪ್ರದರ್ಶನಕ್ಕೆ ಮಾಡಿರುವ ಸಮಾವೇಶ. ಸಚಿವೆ ಶೋಭಾ ಕರಂದ್ಲಾಜೆ `ನಾವು ನಿಮ್ಮಂದಿಗೆ ಇದ್ದೇವೆ, ಮುನ್ನುಗ್ಗಿ~ ಎಂದಿದ್ದಾರೆ. ರಾಜ್ಯದ ಬಹುತೇಕ ಸಚಿವರು ಅವರ ಜತೆ ಇದ್ದಾರೆಂದು ಘೋಷಿಸಿದ್ದಾರೆ.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಆದೇಶ ಯಾರೂ ಪಾಲಿಸುತ್ತಿಲ್ಲ. ರಾಜ್ಯದಲ್ಲಿ ಆಡಳಿತಕ್ಕೆ ತುಕ್ಕು ಹಿಡಿದೆ. ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಗಮನ ನೀಡುತ್ತಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಬರಸ್ಥಿತಿ ನಿಭಾಯಿಸುವ ಭ್ರಮೆಯಿಂದ ಮುಖ್ಯಮಂತ್ರಿ ಹೊರಬರ ಬೇಕು. ಬರಪೀಡಿತ ಪ್ರದೇಶ ಜನರ ಸಮಸ್ಯೆ ನಿವಾ ರಿಸಲು ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾ ಯಿಸಿದರು.ರಾಜ್ಯದ ಬಹು ತೇಕ ಸಚಿವರು ಕೇವಲ ಮಠ ಮಂದಿರ ಹಾಗೂ ದೇವಾಲಯಗಳಿಗೆ ಹೋಗಿ ಬರುವ ಕಾಯಕ ಮಾಡುತ್ತಿದ್ದಾರೆ. ಇದಕ್ಕೆ ಇವರಿಗೆ ಸಮಯ ಸಿಗುತ್ತದೆ. ಆದರೆ, ಬರಪೀಡಿತ ಪ್ರದೇಶಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯ ಸಿಗುತ್ತಿಲ್ಲವೇ? ಎಂದು ಕಿಡಿಕಾರಿದರುಜನರಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಉಂಟಾಗಿದ. ಈ ಉಪಚುನಾವಣೆ ಪ್ರಚಾರದಲ್ಲಿ  ಅದು ಗೋಚರವಾಗುತ್ತಿದೆ. ಆಡಳಿತ ಪಕ್ಷದ ವಿರುದ್ಧದ ಅಲೆ ಕಾಂಗ್ರೆಸ್ ಪಕ್ಷಕ್ಕೆ ಮತವಾಗಿ ಪರಿವರ್ತನೆಯಾಗಲಿದೆ. ಕೇಂದ್ರ ಸರ್ಕಾರದ ಜನಪರ ಯೋಜ ನೆಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿ ಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಗೆಲುವು ನಿಶ್ಚಿತ ಎಂದರು.ಬಿಜೆಪಿ ಅಭ್ಯರ್ಥಿ ಪರ ಸಂಘ ಪರಿವಾರ ಪ್ರಚಾರ ಮಾಡುತ್ತಿದ್ದು, ಜಾತಿ ಆಧಾರದ ಮೂಲಕ ಮತ ಗೆಲ್ಲುವ ಪ್ರಯತ್ನ ನಡೆಸುತ್ತಿದೆ. ಇದು ಕಾನೂನಿಗೆ ವಿರುದ್ಧವಾದುದು. ಕಾಂಗ್ರೆಸ್ ಎಂದಿಗೂ ಇಂತಹ ರಾಜಕಾರಣ ಮಾಡಿಲ್ಲ. ಎಲ್ಲ ಜಾತಿ, ಜನಾಂಗದ ಜನರ ಏಳಿಗೆಗೆ ಶ್ರಮಿಸಿದೆ ಎಂದರು.ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಮಹಮ್ಮದ್, ಡಾ.ವಿಜಯಕುಮಾರ್, ಎ.ಎನ್.ಮಹೇಶ್ ಇನ್ನಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.