ಸೋಮವಾರ, ಮೇ 23, 2022
21 °C

ತುಂಗಾ ನದಿಗೆ ಬೇಕಿದೆ ಸಂಚಾರಕ್ಕೆ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ತೀರದ 2 ಗ್ರಾಮಗಳಾದ ಮತ್ತೂರು ಮತ್ತು ಹೊಸಹಳ್ಳಿಯಲ್ಲಿ ಸಂಸ್ಕೃತ ಭಾಷೆಯನ್ನು ಬಹುಮಟ್ಟಿಗೆ ಬಳಸುವುದರ ಮೂಲಕ ಆ ಭಾಷೆಯನ್ನು ಜೀವಂತವಾಗಿಟ್ಟಿರುವುದು ತಿಳಯದ ವಿಷಯವೇನಲ್ಲ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣವನ್ನು ಸಂಗೀತ ಗ್ರಾಮವೆಂದು ಕರೆಯಲಾಗುತ್ತಿದೆ.ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಗಳು ತುಂಗಾ ನದಿ ತೀರದ ಇಕ್ಕೆಲಗಳಲ್ಲಿವೆ. ಆದರೆ ಈ ಗ್ರಾಮಗಳ ಹಾಗೂ ಸುತ್ತಮುತ್ತಲಿನ ಗ್ರಾಮದವರು ಮತ್ತೂರಿನಿಂದ ಹೊಸಹಳ್ಳಿಗೆ ಅಥವಾ ಹೊಸಹಳ್ಳಿಯಿಂದ ಮತ್ತೂರಿಗೆ ಹೋಗಿ ಬರಲು ತುಂಗಾ ನದಿಯನ್ನು ಕಾಲ್ನಡಿಗೆಯಿಂದಲೇ ದಾಟಬೇಕಾಗಿದೆ. ವಾಹನಗಳಲ್ಲಿ ಓಡಾಡಬೇಕಾದರೆ ಸುಮಾರು 10 ಕಿ.ಮೀ. ದೂರದಲ್ಲಿರುವ ಶಿವಮೊಗ್ಗಕ್ಕೆ ಹೋಗಿಯೇ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ತಲುಪಬೇಕಾದ ಪ್ರಸಂಗ ಅನಿವಾರ್ಯವಾಗಿದೆ.ಈ ಹಿನ್ನೆಲೆಯಲ್ಲಿ ಮತ್ತೂರು-ಹೊಸಹಳ್ಳಿ ಗ್ರಾಮಗಳಿಗೆ ಓಡಾಡುವುದಕ್ಕೆ ಸಂಪರ್ಕ ಸಾಧನವನ್ನು ಬಲಪಡಿಸುವ ಅಗತ್ಯ ಹಿಂದಿನ ದಿನಗಳಿಗಿಂತ ಈಗ ಹೆಚ್ಚಾಗಿದೆ. ಈ ದಿಶೆಯಲ್ಲಿ ವಾಹನಗಳಿಗೂ ಸಂಚಾರಕ್ಕೆ ಅವಕಾಶವಾಗುವಂತೆ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದಲ್ಲಿ ಬಹಳ ಅನುಕೂಲವಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.