ತುಂಗಾ ಮೇಲ್ದಂಡೆ ಮುಖ್ಯ ನಾಲೆಗೆ ನೀರು
ಹೊನ್ನಾಳಿ: ಮಳೆ ಕೊರತೆಯಿಂದ ಕಂಗೆಟ್ಟಿದ್ದ ಜನರು ಇದೀಗ ಕೊಂಚ ನಿರಾಳರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಅಣೆಕಟ್ಟು ತುಂಬಿದ ಹಿನ್ನೆಲೆಯಲ್ಲಿ, ವಾರದಿಂದ ಈಚೆಗೆ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆಗೆ ನೀರು ಹರಿಬಿಡಲಾಗಿದೆ.
ನೀರಿಲ್ಲದೇ ಬಳಲಿದ್ದ ಜಾನುವಾರುಗಳಿಗೆ ಇದರಿಂದ ಅನುಕೂಲ ಆಗಿದೆ. ಜಾನುವಾರುಗಳನ್ನು ರೈತರು ಸ್ವಚ್ಛಗೊಳಿಸುತ್ತಿದ್ದ ದೃಶ್ಯ ಕಳೆದ ಐದಾರು ದಿನಗಳಿಂದ ಸಾಮಾನ್ಯವಾಗಿದೆ. ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆ ಹರಿದುಹೋಗಿರುವ ಅಕ್ಕ-ಪಕ್ಕದ ಗ್ರಾಮಗಳ ಜನರು ಬಟ್ಟೆ-ಬರೆ ತೊಳೆಯಲು ಇದೇ ನೀರನ್ನು ಅವಲಂಬಿಸಿದ್ದಾರೆ.
ಈ ನಾಲೆ ಇಲ್ಲದಿದ್ದರೆ, ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಬಟ್ಟೆ ತೊಳೆಯಲು ಹೊನ್ನಾಳಿಯ ತುಂಗಭದ್ರಾ ನದಿಗೆ ಬರಬೇಕಿತ್ತು. ಇಲ್ಲವೇ ಗ್ರಾಮದ ಕೊಳವೆ ಬಾವಿ, ತೆರೆದ ಬಾವಿಗಳನ್ನು ಅವಲಂಬಿಸಬೇಕಿತ್ತು.
ಈ ನಾಲೆಯ ಬದಿ ಇರುವ ಅನೇಕ ಕೊಳವೆ ಬಾವಿಗಳು ಅಂತರ್ಜಲ ಮರು ಪೂರಣದಿಂದಾಗಿ ಸಮೃದ್ಧವಾಗಿವೆ ಎಂದು ಈ ಭಾಗದ ರೈತರು ಹರ್ಷ ವ್ಯಕ್ತಪಡಿಸುತ್ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.