ತುಂಟ ತುಂಟಿಯ ಕಣ್ಣೋಟ

7

ತುಂಟ ತುಂಟಿಯ ಕಣ್ಣೋಟ

Published:
Updated:

ಶ್ರೀಲಕ್ಷ್ಮೀ ನರಸಿಂಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಶ್ರಿನಿವಾಸನ್ ಮತ್ತು ಪರಿಮಳ ಜಗ್ಗೇಶ್ ಅವರು ನಿರ್ಮಿಸುತ್ತಿರುವ ‘ಡಬಲ್ ಡಕ್ಕರ್’ ಚಿತ್ರಕ್ಕಾಗಿ ಕವಿರಾಜ್ ಬರೆದಿರುವ ‘ತುಂಟಾ ತುಂಟಾ ಹೇ ತುಂಟಾ ಕಾಡುತಾವೋ ಕಣ್ಣೋಟ...ಆಡುತಾವೋ ಚೆಲ್ಲಾಟ- ತುಂಟಿ ತುಂಟಿ ಹೇ ತುಂಟಿ ತುಂಬಾ ತುಂಬಾ ನೀ ತುಂಟಿ... ನಿಲ್ಲಲಾರೆ ಕೈಕಟ್ಟಿ’ ಎಂಬ ಗೀತೆಯ ಚಿತ್ರೀಕರಣ ದೊಡ್ಡಬಳ್ಳಾಪುರದ ಬಳಿಯಿರುವ ಮಲ್ಲಪ್ಪ ಗಾರ್ಡನ್‌ನಲ್ಲಿ ನಡೆದಿದೆ. ಜಗ್ಗೇಶ್, ಶ್ರದ್ಧಾ ಆರ್ಯ ಹಾಗೂ ಮಾ.ಜುನೀತ್ ಗೌಡ ಅಭಿನಯಿಸಿದ ಈ ಗೀತೆಗೆ ದಿಲೀಪ್ ನೃತ್ಯ ನಿರ್ದೇಶನ ಮಾಡಿದರು. ವಿಕ್ಟರಿ ವಾಸು ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಎಚ್.ದಾಸ್ ಅವರ ಛಾಯಗ್ರಹಣವಿದೆ. ಜೈಪಾಲ್ ಸಂಗೀತ ನಿರ್ದೇಶನ,ಕೆ.ಎಂ.ಪ್ರಕಾಶ್ ಸಂಕಲನ, ರಾಜೇಂದ್ರ ಕಾರಂತ್ ಸಂಭಾಷಣೆ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ದಿಲೀಪ್-ತ್ರಿಭುವನ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಜಗ್ಗೇಶ್, ಶ್ರದ್ಧಾ ಆರ್ಯ, ಸಿಯಾ ಗೌತಮ್, ಸುದರ್ಶನ್, ಅವಿನಾಶ್, ಸತ್ಯಭಾಮಾ, ಟೆನ್ನಿಸ್‌ಕೃಷ್ಣ, ಜುನೀತ್ ಗೌಡ, ಚಿದಾನಂದ್, ಶೋಭರಾಜ್ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry