ಗುರುವಾರ , ಡಿಸೆಂಬರ್ 12, 2019
17 °C

ತುಂಡಾಗುವ ಕೂದಲಿಗೆ ಪರಿಹಾರ ಹೇಗೆ

Published:
Updated:
ತುಂಡಾಗುವ ಕೂದಲಿಗೆ ಪರಿಹಾರ ಹೇಗೆ

ದಟ್ಟ ಕೂದಲು ಹೊಂದಿದ್ದ ಶೀಲಾ ಬಾಲ್ಯದಿಂದಲೂ ಸೊಗಸಾದ ಕೇಶಾಲಂಕಾರ ಮಾಡುತ್ತಿದ್ದಳು. ಪ್ರೌಢಾವಸ್ಥೆ ದಾಟುತ್ತಿದ್ದಂತೆ ಅವಳಿಗೆ ಕೂದಲು ಉದುರುವ ಸಮಸ್ಯೆ ಉಂಟಾಯಿತು. ಇದರಿಂದ ವಿಚಲಿತಳಾದ ಅವಳು ತರಾವರಿಯ ಕೇಶವರ್ಧಕ ದ್ರವ್ಯಗಳನ್ನು ಬಳಸಲು ಆರಂಭಿಸಿದಳು. ಅವಳ ಸಮಸ್ಯೆಗೇನೂ ಪರಿಹಾರ ಸಿಗದಾಯಿತು.ಅಂತೆಯೇ ಭವ್ಯಾಳದ್ದು ಮತ್ತೊಂದು ಸಮಸ್ಯೆ. ಆಧುನಿಕ ಕೇಶ ವಿನ್ಯಾಸವನ್ನು ಮೋಹಿಸುವ ಆಕೆ ಅದಕ್ಕಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದಳು. ಶುಭ ಸಮಾರಂಭಕ್ಕೆ ಹಾಜರಾಗಬೇಕು ಎಂದರೆ ಅದಕ್ಕಿಂತ ಪೂರ್ವದಲ್ಲಿಯೇ ಅವಳು `ಹೇರ್ ಸಲೂನ್~ಗೆ ಭೇಟಿ ನೀಡುತ್ತಿದ್ದಳು. ತನ್ನ ಇಚ್ಛೆಗೆ ಹೊಂದಿಕೊಳ್ಳುವ ರಂಗು ರಂಗಿನ ಕೂದಲ ವಿನ್ಯಾಸವನ್ನು ಮಾಡಿಸುತ್ತಿದ್ದಳು. ಕ್ರಮೇಣ ಅವಳ ಕೂದಲು ಕಳಾಹೀನವಾಗುವುದನ್ನು ಗಮನಿಸಿದಳು. ಸಲೂನ್‌ಗಳಲ್ಲಿ ಹಾಕುವ ರಸಾಯನಿಕ ಬಣ್ಣ ಹಾಗೂ ಮಾಡುತ್ತಿದ್ದ ಬಿಸಿ ಉಪಚಾರ ಅವಳ ಕೂದಲು ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಿತು.ಇಂತಹ ಸಮಸ್ಯೆಗಳು ಕೇವಲ ಅವರಿಬ್ಬರದ್ದೇ ಅಲ್ಲ. ಹುಡುಕುತ್ತಾ ಹೋದರೆ ಬಹುಪಾಲಿನ ಮಹಿಳೆಯರು ಒಂದಿಲ್ಲ ಒಂದು ಸಮಸ್ಯೆಯನ್ನು ಹೇಳುತ್ತಾರೆ. ಕೆಲವರಿಗೆ ಕೂದಲು ಉದುರಬಹುದು. ಇನ್ನು ಕೆಲವರಿಗೆ ತಲೆ ಹೊಟ್ಟು ಸಮಸ್ಯೆ ತಲೆ ತಿನ್ನಬಹುದು. ಇಂತಹ ತೊಂದರೆಗಳನ್ನು ಮನಗಂಡು ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ `ಸನ್ ಸಿಲ್ಕ್~ ಹೊಸ ಹೆಜ್ಜೆ ಇಟ್ಟಿದೆ. ಆಧುನಿಕ ಮಹಿಳೆಯರ ಕೇಶ ಸೌಂದರ್ಯಕ್ಕೆ ಹೊಂದಿಕೆಯಾಗುವಂತೆ ಅದು `ಕೆರಟಿನಾಲಜಿ~ ಎಂಬ ಹೆಸರಿನಲ್ಲಿ ನಾನಾ ಬಗೆಯ ದ್ರವ್ಯಗಳನ್ನು ಬಿಡುಗಡೆ ಮಾಡಿದೆ. `ಸನ್‌ಸಿಲ್ಕ್~ನ ಈ ಹೊಸ ಉತ್ಪನ್ನ ಪರಿಣಾಮಕಾರಿಯಾಗಿ ಮಹಿಳೆಯರ ನಿರೀಕ್ಷೆಯನ್ನು ಈಡೇರಿಸುತ್ತದೆ ಎಂಬುದು ಕಂಪೆನಿಯ ಪ್ರತಿಪಾದನೆ.ಬಾಲಿವುಡ್ ಕೇಶ ವಿನ್ಯಾಸಕಿ ದಿಲ್‌ಶಾದ್ ಪಾಸ್ತಕಿಯಾ, ಸನ್‌ಸಿಲ್ಕ್‌ನ  `ಕೆರಿಟಿನಾಲಜಿ~ ಉತ್ಪನ್ನ ಉತ್ತಮ ಗುಣಮಟ್ಟದ್ದಾಗಿದೆ. ಬಣ್ಣದ ವೈವಿಧ್ಯವನ್ನು ಹೊಂದಿದೆ. ಜೊತೆಗೆ ಪ್ರೊಟೀನ್ ಕೊರತೆಯನ್ನು ಎದುರಿಸುವ ಕೂದಲಿಗೆ ಜೀವ ಸೆಲೆಯನ್ನು ತುಂಬುತ್ತದೆ ಎಂದು ಹೇಳಿದ್ದಾರೆ.ಕೂದಲ ಆರೈಕೆಯನ್ನು ಹೇಗೆ ಮಾಡಿಕೊಳ್ಳಬೇಕು? ತಲೆಗೆ ಎಣ್ಣೆ ಪೋಷಿಸಿಕೊಳ್ಳುವ ಬಗ್ಗೆ ವಿವರ ನೀಡುವ ಅವರು ಎಣ್ಣೆ ಪೋಷಣೆ ಅಗತ್ಯವಿಲ್ಲ ಎಂದೇ ಹೇಳುತ್ತಾರೆ. ಕೂದಲ ಪೋಷಣೆಗೆ ಬೆಚ್ಚಗಿನ ನೀರಿನಲ್ಲಿ ವಾರಕ್ಕೆರಡು ಬಾರಿ ತೊಳೆಯಬೇಕು. ಜಿಡ್ಡಿನಂಶ ಬಿಸಿ ನೀರು ಹಾಕುವುದರಿಂದ ಸ್ವಚ್ಛವಾಗುತ್ತದೆ. ಜೊತೆಗೆ  `ಕೆರಟಿನಾಲಜಿ~ ಉತ್ಪನ್ನವನ್ನು ಬಳಸುವುದರಿಂದ ಕಲುಷಿತ ಹವಾಮಾನದಲ್ಲಿ ಕೂದಲು ಅನುಭವಿಸುವ ಯಾತನೆಯನ್ನು ದೂರಮಾಡಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.  `ಕೆರಟಿನಾಲಜಿ~ ಶಾಂಪೂ ಸೇರಿದಂತೆ, `ಹೇರ್ ಸ್ಪಾ ಮಾಸ್ಕ್~ `ಪ್ರೊಟೆಕ್ಟರ್ ಸ್ಪ್ರೈ~ ತುಂಡಾಗುವ ಕೂದಲ ಪೋಷಣೆಗೆ `ಡುಯಲ್ ಟ್ರಿಟ್‌ಮೆಟ್ ಶಾಟ್ಸ್~ ಸೇರಿದಂತೆ ಬಣ್ಣದ ವಿನ್ಯಾಸಕ್ಕಾಗಿ `ಕಲರ್ ಥೆರಪಿ~ಗಾಗಿ ಶಾಂಪೂ ಸೇರಿದಂತೆ ಮೂರು ಬಗೆಯ ದ್ರವ್ಯಗಳನ್ನು ಸನ್‌ಸಿಲ್ಕ್ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಂಬೈನ ತಾಜ್ ಪ್ರಿಸಿಡೆಂಟ್‌ನಲ್ಲಿ ಜನವರಿ 12ರಂದು ಆ ಜವಾಬ್ದಾರಿಯನ್ನು ನಿರ್ವಹಿಸಿದ ರೂಪದರ್ಶಿ ಮಲೈಕಾ ಆರೋರಾ ಬಿಡುಗಡೆ ಮಾಡಿದರು. 

ಪ್ರತಿಕ್ರಿಯಿಸಿ (+)