ಭಾನುವಾರ, ಏಪ್ರಿಲ್ 11, 2021
25 °C

ತುಂಡಾದ ಹಳಿ: ತಪ್ಪಿದ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರೈತರೊಬ್ಬರ ಸಮಯಪ್ರಜ್ಞೆಯಿಂದ ರೈಲು ದುರಂತವೊಂದು ಬುಧವಾರ ತಪ್ಪಿದ ಘಟನೆ ಶಿಶುವನಹಳ್ಳಿ-ಹೆಬಸೂರ ಗ್ರಾಮದ ಬಳಿ ನಡೆದಿದೆ. ರೈಲು ಹಳಿ ತುಂಡಾಗಿದ್ದನ್ನು ಕಂಡ ದುಂದೂರ ಗ್ರಾಮದ ರೈತ ರವಿ ಪಾಟೀಲ, ಬಳ್ಳಾರಿ-ಧಾರವಾಡ ಪ್ಯಾಸೆಂಜರ್ ರೈಲನ್ನು ಬ್ಯಾಟರಿ ಮೂಲಕ ಬೆಳಕು ಬಿಟ್ಟು ನಿಲ್ಲಿಸಿದರು. ಇದರಿಂದ ಭಾರಿ ದುರಂತವೊಂದು ತಪ್ಪಿತು.ಇದಕ್ಕೂ ಮೊದಲು ಧಾರವಾಡ-ಸೊಲ್ಲಾಪುರ ಪ್ಯಾಸೆಂಜರ್ ರೈಲು ದಾಟುವಾಗ ದೊಡ್ಡ ಶಬ್ದ ಬಂದಿದ್ದನ್ನು ರವಿ ಪಾಟೀಲ ಗಮನಿಸಿದಾಗ ಹಳಿ ತುಂಡಾದುದನ್ನು ಕಂಡರು. ಇದಾದ 20 ನಿಮಿಷಕ್ಕೆ ಬಳ್ಳಾರಿ-ಧಾರವಾಡ ಪ್ಯಾಸೆಂಜರ್ ರೈಲು ಬರುವುದನ್ನು ಕಂಡ ಅವರು ತಡೆದರು. ದುರಸ್ತಿ ನಂತರ ರೈಲು ಚಲಿಸಿತು. ಇದರಿಂದ ಒಂದೂವರೆ ತಾಸು ತಡವಾಯಿತು. ಅಂದರೆ ರಾತ್ರಿ 7.40 ಗಂಟೆಗೆ ನಗರಕ್ಕೆ ಬರಬೇಕಿದ್ದ ರೈಲು ರಾತ್ರಿ 9.10 ಗಂಟೆಗೆ ಆಗಮಿಸಿತು.ಲೈಂಗಿಕ ಆರೋಪ: ವರದಿ ನಂತರ ಕ್ರಮ

ಧಾರವಾಡ: ಲೈಂಗಿಕ ಆರೋಪ ಎದುರಿಸುತ್ತಿರುವ ಇಲ್ಲಿನ ಗುರುಕುಲ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ವೈ.ಡಿ.ನವಲಗುಂದ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಲೈಂಗಿಕ ಹಗರಣ ಕುರಿತಂತೆ ಅವರ ಮೇಲೆ ದೂರು ದಾಖಲಾಗಿತ್ತು. ನವಲಗುಂದ ಅವರು ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು.ವೈದ್ಯಕೀಯ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ನವಲಗುಂದ ಅವರನ್ನು ಕರೆತಂದಾಗ ದೂರು ನೀಡಿದವರು ಗಲಾಟೆ ಮಾಡಿದರು. ಕೂಡಲೇ ನವಲಗುಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಅವರಿದ್ದ ಕಾರಿಗೆ ಕೈಯಿಂದ ಗುದ್ದಿ ಹೊರಗೆಳೆಯಲು ಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.