ತುಂತುರು ನೀರಾವರಿ: ಭರ್ಜರಿ ಬೆಳೆ

6

ತುಂತುರು ನೀರಾವರಿ: ಭರ್ಜರಿ ಬೆಳೆ

Published:
Updated:

ಹಿರೀಸಾವೆ: ತುಂತುರು ನೀರಾವರಿ ಮೂಲಕ ಎರಡು ಎಕರೆ ಜಮೀನಲ್ಲಿ ಹಿರೀಸಾವೆ ರೈತರೊಬ್ಬರು ಉತ್ತಮ ವಾಗಿ ಮುಸುಕಿನ ಜೋಳ ಬೇಳೆದಿದ್ದಾರೆ.ಕೆರೆ ತುಂಬಿ 8 ವರ್ಷವಾಯಿತು, ಕಳೆದ ಮೂರು ವರ್ಷಗಳಿಂದ ಹೋಬ ಳಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಯಾಗಿದೆ, ಈ ಬಾರಿಯಂತೂ, ರಾಗಿ ಬೆಳೆ ಯಲು ಬೇಕಾಗುವಷ್ಟು ಮಳೆ ಬಿಳದೆ, ರೈತರು ಬರ ಎದುರಿಸುತ್ತಿದ್ದಾರೆ. ಅಂತರ್ಜಲವು ಸಾವಿರ ಅಡಿಗಳ ಗಡಿ ದಾಟಿದೆ.ಕೆರೆಯಲ್ಲಿ ನೀರಿದ್ದಾಗ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ಮಳೆಯನ್ನೇ ಆಶ್ರಯಿಸಿ ಎಲ್ಲಾ ರೈತರು ರಾಗಿ ಮತ್ತಿತರ ಬೆಳೆಗಳನ್ನು ಬೆಳೆದರೆ ಪೂರ್ಣಚಂದ್ರ ಎಂಬ ರೈತ, ಕೊಳವೆ ಬಾವಿ ಕೊರೆಸಿ, ಬಂದ ಅಲ್ಪ-ಸ್ವಲ್ಪ ನೀರಿನ್ನು ಕ್ರಮಬದ್ದವಾಗಿ ಬಳಸಿ ಮುಸುಕಿನ ಜೋಳ ಬೆಳೆದಿದ್ದಾರೆ.ಕೃಷಿ ಇಲಾಖೆ ಮಾರ್ಗದರ್ಶನದಲ್ಲಿ, ಕಾವೇರಿ ಗೊಲ್ಡ್ 25ಕೆ 55 ಎಂಬ ಉತ್ತಮ ತಳಿಯನ್ನು ಬಿತ್ತಿ, ಜೋಳ ಬೆಳೆದಿದ್ದಾರೆ.

`ಮರಳು ಮಿಶ್ರಿತ ಕಪ್ಪು ಮಣ್ಣಿಗೆ, ಲಘು ಪೋಷಕಾಂಶ ಬೋರೆಕ್ಸ್, ನೈಸರ್ಗಿಕ ಗೊಬ್ಬರದ ಜೋತೆಗೆ, ಎರಡು ಸಲ ರಸಾಯನಿಕ ಗೊಬ್ಬರ ನೀಡಲಾಗಿದೆ, ಎರಡು ಅಡಿ ಅಗಲದ ಸಾಲು, ಒಂದು ಅಡಿಗೆ ಒಂದು ಬೀಜವನ್ನು ಬಿತ್ತಿ, ಎರಡು ತಿಂಗಳವರೆಗೆ ಮೂರು ಬಾರಿ ತುಂತರು ನೀರನ್ನು ಹಾರಿಸಿ, ಮುರಿ ಕಟ್ಟಿದ ಮೇಲೆ ಎರಡು ಸಲ ನೀರನ್ನು ಸಾಲುಗಳ ಮೂಲಕ ಹಾಯಿಸಲಾಗಿದೆ, ಪ್ರತಿ ಜೋಳದಲ್ಲಿ ಮೂರಕ್ಕೂ ಹೆಚ್ಚು ತೆನೆಗಳಿರುವುದು ವಿಶೇಷ ಆದರೆ ಒಂದು ಅಥವ ಎರಡರಲ್ಲಿ ಉತ್ತಮವಾಗಿ ಕಾಳು ಕಟ್ಟಿದ್ದೆ, ಎಕರೆಗೆ 12 ಸಾವಿರ ರೂ ಖರ್ಚು ತಗುಲಿದೆ, ಕಡಿಮೆ ನೀರಿನಲ್ಲಿ ಉತ್ತಮವಾಗಿ ಈ ಜೋಳ ಬೆಳೆಯ ಬಹುದು ಎನ್ನುತ್ತಾರೆ ರೈತ ಬೀದಿಮನೆ ಪೂರ್ಣಚಂದ್ರ.`ಜೋಳದಲ್ಲಿ ಸಾಮಾನ್ಯವಾಗಿ ಎರಡು ತೆನೆಗಳು ಇರುತ್ತವೆ, ಈ ತಳಿಯಲ್ಲಿ ಮೂರಕ್ಕೂ ಹೆಚ್ಚು ತೆನೆಗಳಿವೆ, ಪ್ರತಿ ಎಕರೆಗೆ 30 ರಿಂದ 40 ಕ್ವಿಂಟಾಲ್ ಇಳುವರಿ ಬರುತ್ತದೆ' ಎಂದು ಹಿರೀಸಾವೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶ್ರೀನಿವಾಸ್ ಹೇಳುತ್ತಾರೆ.ಈ ತಳಿಯು 7 ಅಡಿ ಎತ್ತರಕ್ಕೆ ಬೆಳೆಯ ಬೇಕು, ಮಳೆಯ ಅಂಶದ ಕಡಿಮೆಯಿಂದ 5ರಿಂದ 6 ಅಡಿ ಬೇಳೆದಿರುವುದರಿಂದ ಮೂರಕ್ಕೂ ಹೆಚ್ಚು ತೆನೆಗಳು ಬಂದಿವೆ ಎನ್ನುತ್ತಾರೆ ಕಾವೇರಿ ಬೀಜ ಕಂಪನಿಯ ವಿಸ್ತರಣಾಧಿಕಾರಿ ನಾಗರಾಜರೆಡ್ಡಿ.

ಹಿ.ಕೃ.ಚಂದ್ರು, ಹಿರೀಸಾವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry