ಗುರುವಾರ , ಮೇ 13, 2021
16 °C

ತುಂಬಗಿ: ನೀರಿಗಾಗಿ ತಪ್ಪದ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂಬಗಿ: ನೀರಿಗಾಗಿ ತಪ್ಪದ ಪರದಾಟ

ತಾಳಿಕೋಟೆ: ಸಮೀಪದ ತುಂಬಗಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ತೀವ್ರವಾಗಿ ಪರದಾಟದ ಸ್ಥಿತಿ ನಿರ್ಮಾಣವಾಗಿದೆ.ಗ್ರಾಮದ ತೆರೆದ ಬಾವಿಗಳು, ಕೆರೆಗಳು, ಕೊಳವೆ ಬಾವಿಗಳು ಬತ್ತಿ ಹೋಗಿವೆ. ನೀರಿನ ಸಮಸ್ಯೆ ಹೆಚ್ಚಾಗಿದ್ದು, ಟ್ಯಾಂಕರ್ ಮೂಲಕ ಕುಡಿಯಲು ನೀರು ಪೂರೈಸುವಂತೆ ಗ್ರಾಮ ಪಂಚಾಯ್ತಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಜಿಪಂ. ಸಿಇಒ ಹಾಗೂ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆಗೆ ಮುಂದಗಿದ್ದಾರೆ.ಗ್ರಾಮಕ್ಕೆ ನೀರು ಪೂರೈಕೆ ವ್ಯವಸ್ಥೆ ಮಾಡಲು ಆದ್ಯತೆ ನೀಡಬೇಕು. ಮಾನವೀಯ ದೃಷ್ಟಿಯಿಂದ ಜನರ ಸಂಕಷ್ಟ ನಿವಾರಿಸಲು ಗಮನ ಹರಿಸಬೇಕು ಎಂದು ಗ್ರಾಮದ ಎಸ್. ಎಚ್. ಢವಳಗಿ, ಶಂಕ್ರು ಗೊಟಗುಣಕಿ, ಎಸ್. ಎಂ. ಕೊಳ್ಳಿ, ಮಲ್ಲು ಮುತ್ತೇಗೊಳ, ಎಂ.ಎ. ಢವಳಗಿ ಮನವಿ ಮಾಡಿದ್ದಾರೆ.ನೀರಿಗೆ ಸಮಸ್ಯೆಯಿಲ್ಲ

ಗ್ರಾ.ಪಂ.ಅಧ್ಯಕ್ಷ ಸೋಮನಗೌಡ ಅವರು `ಪ್ರಜಾವಾಣಿ' ಜೊತೆ ಮಾತನಾಡಿ, ಗ್ರಾಮಕ್ಕೆ ನೀರು ಪೂರೈಸುವ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಅದಕ್ಕಾಗಿ ಜಿ.ಪಂ. ನಿಂದ ಮೂರ‌್ನಾಲ್ಕು ದಿನಗಳಿಂದ ಬಾವಿಯ ಆಳ ಪರಿಶೀಲನೆ ಆರಂಭಿಸಿದ್ದಾರೆ. ಎರಡು ದಿನಗಳ ಮಟ್ಟಿಗೆ ನೀರಿನ ವ್ಯತ್ಯಯವಾಗಿದೆ. ಗ್ರಾ.ಪಂ. ನಿಂದಲೇ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಜನಸಂಖ್ಯೆ ಹೆಚ್ಚಾಗಿರುವುದರಿಂದ ಟ್ಯಾಂಕರ್ ನೀರು ಸಾಕಾಗುತ್ತಿಲ್ಲ ಎಂದು ಹೇಳಿದರು.ಗ್ರಾಮಕ್ಕೆ ನೀರು ಪೂರೈಸುವ ಬಾವಿಯ ಪಕ್ಕದಲ್ಲಿಯೇ ಮಲ್ಲಣ್ಣ ಕೊಳ್ಳಿ ಎಂಬವರ ಬಾವಿ ಇದೆ. ಅಲ್ಲಿಂದ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗುರುವಾರದಿಂದಲೇ ನೀರು ಪೂರೈಸಲಾಗುತ್ತದೆ ಎಂದು ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.