ಬುಧವಾರ, ನವೆಂಬರ್ 20, 2019
20 °C
ಮಾಡಿ ನಲಿ ಸರಣಿ-24

ತುಂಬಿದ್ದರೂ ಕಡಿಮೆ ಆಯ್ತು

Published:
Updated:

ವಿಧಾನ

1.ಒಂದು ಪ್ರನಾಳದಲ್ಲಿ ((tube)1/3 ದಷ್ಟು ಪುಡಿ ಉಪ್ಪನ್ನು ತೆಗೆದುಕೊಳ್ಳಿ.

2.ಪ್ರನಾಳದ ಬಾಯಿಯ ಕೆಳಗೆ ಒಂದು ರಬ್ಬರ್ ಬ್ಯಾಂಡ್ ಹಾಕಿ.

3.ಅನಂತರ ಸಾವಕಾಶವಾಗಿ ಪ್ರನಾಳದಲ್ಲಿ ನೀರನ್ನು ಹಾಕುತ್ತಾ ಹೋಗಿ. ನೀರಿನ ಮಟ್ಟ ರಬ್ಬರ್ ಬ್ಯಾಂಡ್‌ನವರೆಗೂ ಬರಲಿ.ಪ್ರಶ್ನೆ

ಈಗ ಪ್ರನಾಳದ ಬಾಯಿಯನ್ನು ಹೆಬ್ಬೆರಳಿನಿಂದ ಮುಚ್ಚಿ, ಜೋರಾಗಿ ಅಲುಗಾಡಿಸಿ ಇಡಿ. ಪ್ರನಾಳದಲ್ಲಿ ಆದ ಬದಲಾವಣೆ ಏನು? ಯಾಕೆ?ಉತ್ತರ

ದ್ರಾವಣದ ಮಟ್ಟ ರಬ್ಬರ್ ಬ್ಯಾಂಡ್‌ಗಿಂತಲೂ ಸ್ವಲ್ಪ ಕೆಳಗಿರುತ್ತದೆ. ಯಾಕೆಂದರೆ ಉಪ್ಪು ನೀರಿನಲ್ಲಿ ಕರಗಿದಾಗ, ಉಪ್ಪಿನ ಅಣುಗಳು (NaCl)ಒಡೆದು ಸೋಡಿಯಂ (Na) ಹಾಗೂ ಕ್ಲೋರಿನ್ (Cl) ಅಯಾನುಗಳಾಗುತ್ತವೆ. ಈ ಅಯಾನುಗಳು ಉಪ್ಪಿನ ಅಣುಗಳಿಗಿಂತ ತೀರಾ ಚಿಕ್ಕವು.

ಇವು ನೀರಿನ ಅಂತರಾಣ್ವಕ ಸ್ಥಳವನ್ನು (Intermolecular space)  ಆಕ್ರಮಿಸುತ್ತವೆ. ಹೀಗಾಗಿ ಒಟ್ಟು ಗಾತ್ರ ಕಡಿಮೆಯಾಗಿ ಪ್ರನಾಳದಲ್ಲಿ ದ್ರಾವಣದ ಮಟ್ಟ ಕುಗ್ಗುತ್ತದೆ.

ಪ್ರತಿಕ್ರಿಯಿಸಿ (+)