ಶುಕ್ರವಾರ, ನವೆಂಬರ್ 15, 2019
27 °C

ತುಟ್ಟಿ ಭತ್ಯೆ ಏರಿಕೆ ನಿರ್ಧಾರ ಮುಂದೂಡಿಕೆ

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ(ಡಿ.ಎ)ಯನ್ನು ಈಗಿರುವ ಶೇ 72 ರಿಂದ 80ಕ್ಕೆ ಏರಿಸುವ ನಿರ್ಧಾರವನ್ನು  ಸರ್ಕಾರ ಮಂಗಳವಾರ ಮುಂದೂಡಿದೆ.ತುಟ್ಟಿ ಭತ್ಯೆ ಏರಿಕೆಯಾದಲ್ಲಿ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 30ಲಕ್ಷ ಪಿಂಚಣಿದಾರರು ಇದರ ಫಲಾನುಭವಿಗಳಾಗಲಿದ್ದರು.

`ಸಂಪುಟ ಸಭೆಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಗೈರು ಹಾಜರಿಯಿಂದಾಗಿ ಈ ಪ್ರಸ್ತಾವನೆ ಮುಂದೂಡಲಾಗಿದೆ'  ಎಂದು ಸಚಿವ ಮನಿಷ್ ತಿವಾರಿ  ತಿಳಿಸಿದ್ದಾರೆ. ಸಚಿವ ಪಿ. ಚಿದಂಬರಂ ಅವರು ಸದ್ಯ ಜಪಾನ್ ದೇಶದ ಪ್ರವಾಸದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)