ತುಮಕೂರು ತಂಡದ ಉತ್ತಮ ಮೊತ್ತ

ಗುರುವಾರ , ಜೂಲೈ 18, 2019
26 °C
ಕ್ರಿಕೆಟ್: ಮಿಂಚಿದ ರಾಹುಲ್, ಪವನ್

ತುಮಕೂರು ತಂಡದ ಉತ್ತಮ ಮೊತ್ತ

Published:
Updated:

ಬೆಂಗಳೂರು: ತಮಕೂರು ವಲಯ ತಂಡದವರು ಇಲ್ಲಿ ನಡೆಯುತ್ತಿರುವ ಎಸ್.ಎ.ಶ್ರೀನಿವಾಸನ್ ಸ್ಮಾರಕ 25 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಕಾರ್ಯದರ್ಶಿ ಇಲೆವೆನ್ ಎದುರು ಉತ್ತಮ ಮೊತ್ತ ಪೇರಿಸಿದ್ದಾರೆ.ಎರಡು ದಿನಗಳ ಈ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ ತುಮಕೂರು ತಂಡ ಮೊದಲ ಇನಿಂಗ್ಸ್‌ನಲ್ಲಿ 84.1 ಓವರ್‌ಗಳಲ್ಲಿ 293 ರನ್ ಗಳಿಸಿದೆ. ಎಚ್.ಪಿ.ರಾಹುಲ್ ಹಾಗೂ ಪವನ್ ಕುಮಾರ್ ಅರ್ಧ ಶತಕ ಗಳಿಸಿದರು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಸೆಕ್ರೇಟರಿ ಇಲೆವೆನ್ 21 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಪವನ್ ಆ ಎರಡೂ ವಿಕೆಟ್ ಕಬಳಿಸಿದರು.ಸಂಕ್ಷಿಪ್ತ ಸ್ಕೋರ್: ತುಮಕೂರು ವಲಯ: ಮೊದಲ ಇನಿಂಗ್ಸ್: 84.1 ಓವರ್‌ಗಳಲ್ಲಿ 293 (ಎಚ್.ಪಿ.ರಾಹುಲ್ 76, ಪವನ್ ಕುಮಾರ್ 62; ದೈವಿಕ್ ವಿಶ್ವನಾಥ್ 81ಕ್ಕೆ4, ದಿಶಾಂಶು ನೇಗಿ 41ಕ್ಕೆ4); ಸೆಕ್ರೇಟರಿ ಇಲೆವೆನ್: 21 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 42 (ಪವನ್ ಕುಮಾರ್ 5ಕ್ಕೆ2).ಮಂಗಳೂರು ವಲಯ: 88.3 ಓವರ್‌ಗಳಲ್ಲಿ 284 (ನಸ್ರುಲ್ಲಾ 34, ನಿಶಾಂತ್ ರಾಜ್ 30, ಆದಿತ್ಯ ರಾಜ್ 37, ಮುತಾಹಿರ್ 34; ಭರತ್ ಕೊಂಡಾಜಿ 86ಕ್ಕೆ4, ಹಾರ್ದಿಕ್ ಮುನೋತ್ 57ಕ್ಕೆ2, ಅಬ್ದುಲ್ ಮಜೀದ್ 42ಕ್ಕೆ3); ಸಂಯುಕ್ತ ನಗರ ಇಲೆವೆನ್: 21 ಓವರ್‌ಗಳಲ್ಲಿ 1 ವಿಕೆಟ್‌ಗೆ 91 (ಮಿರ್ ಕೌನಿಯನ್ ಅಬ್ಬಾಸ್ ಬ್ಯಾಟಿಂಗ್ 56, ಲಿಯಾನ್ ಖಾನ್ ಬ್ಯಾಟಿಂಗ್ 33).ಬೆಂಗಳೂರು ವಲಯ: 89.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 479 ಡಿಕ್ಲೇರ್ಡ್ (ಪವನ್ ದೇಶಪಾಂಡೆ 133, ದಿನೇಶ್ ಬೋರ್ವಾಂಕರ್ ಔಟಾಗದೆ 200, ಜೀಶನ್ ಅಲಿ ಸೈಯದ್ ಔಟಾಗದೆ 51; ಶಶಾಂಕ್ 70ಕ್ಕೆ2); ಮೈಸೂರು ವಲಯ: 3.2 ಓವರ್‌ಗಳಲ್ಲಿ 1 ವಿಕೆಟ್‌ಗೆ 10.ಅಧ್ಯಕ್ಷರ ಇಲೆವೆನ್: 89.5 ಓವರ್‌ಗಳಲ್ಲಿ 9 ವಿಕೆಟ್‌ಗೆ 342 ಡಿಕ್ಲೇರ್ಡ್ (ಸಾದಿಕ್ ಕಿರ್ಮಾನಿ ಔಟಾಗದೆ 153, ಕ್ರಾಂತಿ ಕುಮಾರ್ 50; ಎಂ.ರಾಜೇಶ್ 69ಕ್ಕೆ4, ಕಾರ್ತಿಕೇಯನ್ 39ಕ್ಕೆ2); ಶಿವಮೊಗ್ಗ ವಲಯ: 11 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 33 (ಅಭಿಷೇಕ್ ಭಟ್ 18ಕ್ಕೆ2).ಬೆಂಗಳೂರು ನಗರ ಇಲೆವೆನ್: 67.5 ಓವರ್‌ಗಳಲ್ಲಿ 215 (ಆರ್.ಸಮರ್ಥ್ 67, ಸ್ಟಾಲಿನ್ ಹೂವರ್ 94, ನಿಹಾಲ್ ಎಫ್ ಶಿಲಾರ್ 61; ಬಿ.ಅವಿನಾಶ್ 64ಕ್ಕೆ2, ಸಂಜೀವ್ ನಾಯ್ಕ 54ಕ್ಕೆ4); ರಾಯಚೂರು ವಲಯ: 39 ಓವರ್‌ಗಳಲ್ಲಿ 4 ವಿಕೆಟ್‌ಗೆ 63 (ಐ.ಜಿ.ಅನಿಲ್ 8ಕ್ಕೆ2) , ಸಂದೇಶ್ ಸತೀಶ್ 12ಕ್ಕೆ2)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry