ಗುರುವಾರ , ಫೆಬ್ರವರಿ 25, 2021
20 °C

ತುಮಕೂರು: ಶಂಕಿತ ಉಗ್ರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶಂಕಿತ ಉಗ್ರ ಬಂಧನ

ತುಮಕೂರು: ನಗರದ ಪೂರ್‌ಹೌಸ್ ಕಾಲೊನಿ ವಾಸಿ ಹುಸೇನ್‌ ಮುಜಾಹಿದ್ದೀನ್ ಎಂಬಾತನನ್ನು ದೆಹಲಿಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶುಕ್ರವಾರ ನಸುಕಿನ 4.30ಕ್ಕೆ ಬಂಧಿಸಿ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದೆ.

ಇಲ್ಲಿನ ಮಂಡಿಪೇಟೆಯಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ. ಸ್ಥಳೀಯ ಪೊಲೀಸರಿಗೂ ಎನ್‌ಐಎ ನಡೆಸಿದ ಕಾರ್ಯಾಚರಣೆಯ ಸುಳಿವು ಇರಲಿಲ್ಲ. ಮನೆಗೆ ಬೀಗ ಹಾಕಿದೆ. ಮನೆ ಎದುರು ಮುಂಜಾನೆಯಿಂದ ಜನಜಂಗುಳಿ ಸೇರಿದೆ.ಉಗ್ರಗಾಮಿ ಸಂಘಟನೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.