ಮಂಗಳವಾರ, ಜೂನ್ 22, 2021
22 °C

ತುಮರಿ: ಗ್ರಾಮಸಭೆಗೆ ಗ್ರಾಮಸ್ಥರ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮರಿ: ಸ್ವತಃ ಗ್ರಾಮ ಪಂಚಾಯ್ತಿ ಅಧ್ಯಕ್ಷರು ವಸತಿ ಯೋಜನೆಯಲ್ಲಿ ಅಪೂರ್ಣ ಮನೆಗೆ ಪೂರ್ಣ ಬಿಲ್ ಪಡೆದಿರುವುದನ್ನು ವಿರೋಧಿಸಿ ಗ್ರಾಮಸ್ಥರು ತುಮರಿ ಗ್ರಾಮ ಪಂಚಾಯ್ತಿ ಗ್ರಾಮಸಭೆ ಬಹಿಷ್ಕರಿಸಿದ ಘಟನೆ ಮಂಗಳವಾರ ನಡೆಯಿತು.ಗೋಪಾಲಗೌಡ ರಂಗಮಂದಿರದಲ್ಲಿ  ಬೆಳಿಗ್ಗೆ ಸಭೆ ಆರಂಭವಾದೊಡನೆ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಸಭೆಯ ನೋಡೆಲ್ ಅಧಿಕಾರಿ ಅಂಜನಪ್ಪ ಚಾಲನೆ ನೀಡಿದರು.ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಹಿಂದಿನ ವರ್ಷದ ವಸತಿ ಯೋಜನೆಯ ಆಶ್ರಯ ಫಲಾನುಭವಿಯಾದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾರತಿ ಗಣಪತಿ ಪಂಚಾಯತ್‌ರಾಜ್ ನಿಯಮಾವಳಿ ಉಲ್ಲಂಘಿಸಿ, ಮಣ್ಣು ಗೋಡೆಯ ಮನೆಗೆ ಪೂರ್ಣ ಬಿಲ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಕಡತ ಬಹಿರಂಗಕ್ಕೆ ಆಗ್ರಹಿಸಿದರು.ಸಭೆಯಲ್ಲಿ ಕಡತಗಳನ್ನು ಪರಿಶೀಲಿಸಿದ ನಂತರ ಪೂರ್ಣಬಿಲ್ ಪಾವತಿಯಾದ ಬಗ್ಗೆ ಖಾತರಿಪಡಿಸಿಕೊಂಡ ಗ್ರಾಮಸ್ಥರು ಸ್ವತಃ ಅಧ್ಯಕ್ಷರೇ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ.

ಸಾಮಾನ್ಯ ಜನರಿಗೆ ನಿಬಂಧನೆ ವಿಧಿಸುವ ಪಂಚಾಯ್ತಿ ಆಡಳಿತ ತಮ್ಮ ಸದಸ್ಯರಿಗೆ ರಿಯಾಯಿತಿ ಕೊಟ್ಟಿರುವುದನ್ನು ಖಂಡಿಸಿದರು.ಸಭೆಯಲ್ಲಿ ಮಾತನಾಡಿದ ಮಾಜಿ ಗ್ರಾ.ಪಂ. ಸದಸ್ಯ ಮಂಜಯ್ಯ ಜೈನ್ ಪ್ರಾಮಾಣಿಕತೆಯ ಮೂಲಕ ಜನರಿಗೆ ಆದರ್ಶ ತುಂಬಬೇಕಾದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸ್ವತಃ ಪಂಚಾಯ್ತಿಗೆ ತಪ್ಪು ದಾಖಲೆ ಒದಗಿಸಿದ್ದಾರೆ. ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಗ್ರಾಮಸಭೆ ಒಕ್ಕೂರಲಿನಿಂದ ಅಧ್ಯಕ್ಷರ ಈ ವರ್ತನೆಯನ್ನು ಖಂಡಿಸಿತು.ಈ ಬಗ್ಗೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ, ಸೂಕ್ತ ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕರಿಸಿದ ನಂತರ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಹೊರ ನಡೆದರು.ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ತಾ.ಪಂ ಸದಸ್ಯ ಹರೀಶ್‌ಗಂಟೆ, ಗ್ರಾ.ಪಂ ಅಧ್ಯಕ್ಷೆ ಭಾರತಿ ಗಣಪತಿ, ಕಾರ್ಗಲ್ ಪಿ ಎಸ್‌ಐ ಗುರುರಾಜ್, ಪಿಡಿಒ ಮೋಹನ್ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.