ತುರುವನೂರು: ಬಳಕೆಯಾಗದ ವೀರಸೌಧ

7

ತುರುವನೂರು: ಬಳಕೆಯಾಗದ ವೀರಸೌಧ

Published:
Updated:

ಚಿತ್ರದುರ್ಗ: ತಾಲ್ಲೂಕಿನ ತುರುವನೂರು ಗ್ರಾಮದಲ್ಲಿನ ವೀರಸೌಧ ನಿಷ್ಪ್ರಯೋಜಕವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ.ಸ್ವಾತಂತ್ರ ಯೋಧರ ನೆನಪಿಗಾಗಿ ನಿರ್ಮಿಸಿರುವ ವೀರಸೌಧದ ಅಕ್ಷರಶಃ ಇಂದು ಪಾಳು ಬಿದ್ದಿದೆ. ಈ ಕಟ್ಟಡದ ಮೂಲ ಉದ್ದೇಶವೇ ಈಡೇರುತ್ತಿಲ್ಲ. ಈ ವೀರಸೌಧದ ಬಾಗಿಲು ತೆರೆಯುವುದೇ ಅಪರೂಪ. ಇತ್ತೀಚೆಗೆ ಈ ವೀರಸೌಧ ರೈತ ಸಂಪರ್ಕಕ್ಕೂ ಬಳಕೆಯಾಗುತ್ತಿದ್ದು, ಶೇಂಗಾ ಮತ್ತಿತರರ ಬೀಜಗಳನ್ನು ಸಂಗ್ರಹಿಸಿಡುತ್ತಾರೆ. ಈ ಕಟ್ಟಡದ ಆವರಣ ಸೋಮಾರಿಗಳು ನಿದ್ದೆ ಮಾಡುತ್ತಾರೆ. ಜತೆಗೆ ಇಲ್ಲಿ ಜೂಜಾಟ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಯಾರೂ ಇತ್ತ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ವೀರಸೌಧದ ಕಳಪೆ ಕಾಮಗಾರಿಯಿಂದ ಕಟ್ಟಡದ ಮೇಲ್ಛಾವಣಿ ಕಾಂಕ್ರೀಟ್ ಉದುರುತ್ತಿದೆ. ಈ ವೀರಸೌಧಕ್ಕೆ ಕಂಪೌಂಡ್ ಇಲ್ಲ. ಇದರಿಂದ ಈ ವೀರಸೌಧದ ಜಾಗವನ್ನು ಸಹ ಅಕ್ರಮವಾಗಿ ಕಬಳಿಸುವ ಪ್ರಯತ್ನವೂ ನಡೆಯುತ್ತಿದೆ. ಕಂಪೌಂಡ್ ನಿರ್ಮಿಸಿದರೆ ಒತ್ತುವರಿ ನಿಯಂತ್ರಿಸಲು ಮತ್ತು ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ.ಈ ವೀರಸೌಧಕ್ಕೆ ಕಾಯಕಲ್ಪ ನೀಡಿ ರಚನಾತ್ಮಕ ಚಟುವಟಿಕೆಗಳಿಗೆ ಬಳಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಆರ್.ವಿ. ಜಯಪ್ರಕಾಶ, ರವಿಕುಮಾರ್, ಸಿದ್ದೇಶ್, ನಟೇಶ್, ಉಮಾಪತಿ ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry