ತುರುವೇಕೆರೆ: ಕೊಬ್ಬರಿ ಗೋದಾಮಿಗೆ ಬೆಂಕಿ

ಮಂಗಳವಾರ, ಜೂಲೈ 23, 2019
27 °C

ತುರುವೇಕೆರೆ: ಕೊಬ್ಬರಿ ಗೋದಾಮಿಗೆ ಬೆಂಕಿ

Published:
Updated:

ತುರುವೇಕೆರೆ: ತಾಲ್ಲೂಕಿನ ಡಿ.ಶೆಟ್ಟಿ ಹಳ್ಳಿಯ ಕೊಬ್ಬರಿ ಗೋದಾಮಿಗೆ ಬುಧವಾರ ರಾತ್ರಿ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 70 ಸಾವಿರ ಕ್ಕೂ ಹೆಚ್ಚು ಕೊಬ್ಬರಿ ಸಂಪೂರ್ಣ ಭಸ್ಮವಾಗಿ, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. 15 ಸಾವಿರದಷ್ಟು ಸುಲಿದ ಕೊಬರಿ ಹಾಗೂ 55 ಸಾವಿರ ಒಣ ಕೊಬ್ಬರಿ ಇತ್ತು. ರಾತ್ರಿ 1.30ಕ್ಕೆ ಮಾಲೀಕ ನಂಜುಂಡಪ್ಪ ಗೋದಾಮಿಗೆ ಬೆಂಕಿ ಬಿದ್ದಿರುವುದು ಗೊತ್ತಾಗಿದೆ. ಅನಾ ಹುತಕ್ಕೆ ಕಾರಣ ತಿಳಿದು ಬಂದಿಲ್ಲ.  ರೂ.12 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.   ತಹ ಶೀಲ್ದಾರ್ ಟಿ.ಆರ್.ಶೋಭಾ, ಸಿಪಿಐ ಕೆ.ಬಿ.ವಿಶ್ವನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಅಗ್ನಿಶಾಮಕ ದಳದ ಕಚೇರಿಗೆ ಬುಧವಾರ ರಾತ್ರಿ ನೂರಾರು ಬಾರಿ ಪ್ರಯತ್ನ ಮಾಡಿದರೂ ಸಂಪರ್ಕ ಸಾಧಿಸಲಾಗಲಿಲ್ಲ ಡಿ.ಶೆಟ್ಟಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ತುಮಕೂರು ಕಚೇರಿ ಮೂಲಕ ಸ್ಥಳೀಯ ಸಿಬ್ಬಂದಿ ಸಂಪರ್ಕ ಸಿಕ್ಕಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry