ಸೋಮವಾರ, ಜೂನ್ 21, 2021
27 °C

ತುರುವೇಕೆರೆ: ಮಡೆ ಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಬೇಟೆರಾಯಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಮಂಗಳವಾರ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಮಡೆ ಸ್ನಾನದಲ್ಲಿ ಭಾಗವಹಿಸಿ ಉಚ್ಚಿಷ್ಟದ ಮೇಲೆ ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸಿದರು.ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಮಂಗಳವಾರ ಮಡೆಸ್ನಾನಕ್ಕೆ ಸಕಲ ಸಿದ್ಧತೆ ಮಾಡಲಾಗಿತ್ತು. ಮಧ್ಯಾಹ್ನ 1ಕ್ಕೆ ದೇವಾಲಯದ ಸ್ಥಾನೀಕರಿಂದ ಅನ್ನಪೂಜೆ, ಸ್ವಾಮಿಗೆ, ಅಮ್ಮನವರಿಗೆ ಮಹಾನಿವೇದನೆ ನಂತರ ಸಂತರ್ಪಣೆ ನಡೆಯಿತು. ಮೊದಲ ಪಂಕ್ತಿ ಮುಗಿಯುತ್ತಿದ್ದಂತೆ ಹರಕೆ ಹೊತ್ತು ಉಪವಾಸ ನಿರತರಾದ ಭಕ್ತವೃಂದದ ಮೇಲೆ ತೀರ್ಥಪ್ರೋಕ್ಷಣೆ ಮಾಡಲಾಯಿತು.ಭಕ್ತರು ಸುಬ್ಬಾ ಸುಬ್ಬಾ ಗೋವಿಂದ, ಸುಬ್ರಹ್ಮಣ್ಯ ಗೋವಿಂದ, ಕುಮಾರಧಾರ ಗೋವಿಂದ, ಕುಕ್ಕೇಲಿಂಗ ಗೋವಿಂದ ಎಂದು ನಾಮೋಚ್ಚಾರಣೆ ಮಾಡುತ್ತಾ ದೇವಸ್ಥಾನದ ಒಳಪ್ರಾಕಾರದ ಸುತ್ತಲೂ ಎಲೆಗಳ ಮೇಲೆ ಮೂರು ಸುತ್ತು ಉರುಳು ಸೇವೆ ನಡೆಸಿ ಹರಕೆ ತೀರಿಸಿದರು. ಆ ನಂತರ ವ್ರತನಿರತರು ತಲೆ ಮೇಲೆ ಎಲೆ ಹೊತ್ತು ಮೆರವಣಿಗೆಯಲ್ಲಿ ಸ್ನಾನಕ್ಕೆ ತೆರಳಿದರು.ಭಕ್ತರು ಸ್ನಾನ ಮಾಡಿ ಭೋಜನ ಪಾತ್ರೆ ಮೇಲೆ ಉರುಳುತ್ತಾರೆ. ಆ ಪಾತ್ರೆಗಳನ್ನೇ ತಲೆ ಮೇಲೆ ಹೊತ್ತು ಪಕ್ಷಿ ವಾಹನ ಮಡುವಿನಲ್ಲಿ ಸ್ನಾನ ಮಾಡುತ್ತಾರೆ ಎಂಬ ಉಲ್ಲೇಖವಿದೆ. ಭೋಜನ ಪಾತ್ರೆ ಬದಲು ಎಲೆಗಳ ಮೇಲೆ ಹೊರಳುವ ಸಂಪ್ರದಾಯ ಯಾವಾಗ ಆರಂಭವಾಯಿತು ಎಂಬುದು ಮಾತ್ರ ತಿಳಿದು ಬಂದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.