ತುಳುಭಾಷೆ, ಸಂಸ್ಕೃತಿ ಬಗ್ಗೆ ಗೌರವವಿರಲಿ
ಕಟಪಾಡಿ: ತುಳುಮಣ್ಣಿನ ಭಾಷೆ, ಸಂಸ್ಕೃತಿ ಪ್ರತಿಬಿಂಬಿಸುವ ಕಲಾಪ್ರಕಾರಗಳ ಬಗ್ಗೆ ನಾಡಿಗೆ ಜನತೆ ಅಪಾರ ಗೌರವ ಹೊಂದಿರಬೇಕು ಎಂದು ಮುಂಬೈ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ ಅಭಿಪ್ರಾಯಪಟ್ಟರು.
ಉಡುಪಿಯ ಯುವ ಚಿತ್ರಕಲಾವಿದ ರಮೇಶ್ ಕಿದಿಯೂರು ಅವರ ‘ತುಳು ಕಲಾಮೇಳ-2011’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮುಂಬೈ ಕುರ್ಲಾ ಭಂಡಾರಿ ಎಸ್ಟೇಟ್ ಬಂಟರ ಭವನದ ರಾಧಾ ಬಾಯಿ ಭಂಡಾರಿ ಸಭಾಗೃಹದಲ್ಲಿ ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಹೊರನಾಡಿನ ಮುಂಬೈಯಲ್ಲಿ ನೆಲೆಸಿರುವ ಕರಾವಳಿ ಜನತೆ ತುಳುನಾಡಿನ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳಸಬೇಕು ಎಂದರು. ಬಳ್ಳಾರಿಯ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಸಮೃದ್ಧವಾಗಿದ್ದು, ಇಂತಹ ಕಲಾಮೇಳಗಳ ಮೂಲಕ ನಾಡಿನ ಕಲೆಯನ್ನು ದೇಶಾದ್ಯಂತ ಪ್ರಚುರಪಡಿಸುವ ಕಾರ್ಯ ಶ್ಲಾಘನೀಯ ಎಂದರು.
ಮುಂಬೈ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ, ಪತ್ರಕರ್ತ ಪರಮೇಶ್ವರ್ ಗುಂಡ್ಕಲ್, ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಅಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ಮುಂಬೈ ಬಂಟರ ಸಂಘ ಮಾಜಿ ಅಧ್ಯಕ್ಷ ಬಿ.ವಿವೇಕ್ ಶೆಟ್ಟಿ, ಭಿವಂಡಿ ಬಂಟರ ಸಂಘದ ಶೆಡ್ಡೆ ವಿಶ್ವನಾಥ್ ಶೆಟ್ಟಿ, ಚಂದ್ರಶೇಖರ್ ಪಾಲೆತ್ತಾಡಿ, ಮುಂಬೈ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಆಶಾ ಮನೋಹರ್ ಹೆಗ್ಡೆ, ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿ ಭರತ್ ಕುಮಾರ್ ಪೊಲಿಪು, ಮಾಜಿ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಆರ್.ಕೆ.ಶೆಟ್ಟಿ, ಮುಂಬೈ ಸನಾತನ ವೇದಿಕೆ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಮುಂಬೈ ಬಂಟ್ಸ್ ನ್ಯಾಯಮಂಡಳಿ ಕಾರ್ಯಾಧ್ಯಕ್ಷ ಎಂ.ಡಿ.ಶೆಟ್ಟಿ, ಎಸ್.ಸುರೇಂದ್ರ ಮಲ್ಲಿ, ಪ್ರಭಾಕರ್ ಸುವರ್ಣ ಬೆಳುವಾಯಿ, ಮುಂಬೈ ಮೂಕಾಂಬಿಕ ಪಬ್ಲಿಷರ್ಸ್ ಸಂಸ್ಥೆಯ ಪ್ರಕಾಶ್ ಪೂಜಾರಿ ಮುಂಬೈ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.