ಮಂಗಳವಾರ, ಜೂನ್ 15, 2021
21 °C

ತೂಕದ ಚಿತ್ರ: ಎಚ್ಚರಿಕೆಯ ಮಂತ್ರ

ಅನುಪಮಾ ಫಾಸಿ Updated:

ಅಕ್ಷರ ಗಾತ್ರ : | |

ಹೆಣ್ಣಿನ ಆಂತರ್ಯವನ್ನು ಅರಿತವರಾರು? ಅವಳ ಮನಸ್ಸನ್ನು ಸೆರೆಹಿಡಿಯುವ ಪ್ರಯತ್ನದಲ್ಲಿ ಹಲವರು ಸೋತಿಹರು. ಆದರೆ, ಸೋಲರಿಯದ ಕಲಾವಿದ ತನ್ನ ಕಲಾಕುಂಚದಲ್ಲಿ ಹೆಣ್ಣನ್ನು ಸೆರೆಹಿಡಿಯಲು ಇನ್ನಿಲ್ಲದೆ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತ ಸಾಗುತ್ತಿರುವ..ಅಂತಹ ಕಲಾವಿದರಲ್ಲಿ ಒಬ್ಬರಾದ ಜಗದೀಶ ಕಡೂರು ಅವರು ಹೆಣ್ಣಿನ ಸೌಂದರ್ಯ ಮತ್ತು ಆಂತರ್ಯವನ್ನು ಸೆರೆಹಿಡಿಯುವಲ್ಲಿ ತಮ್ಮ ನಿರಂತರ ಪ್ರಯತ್ನವನ್ನು ಮಾಡುತ್ತಿದ್ದಾರೆ.ಮೂರು ವರ್ಷಗಳಿಗೊಮ್ಮ ಇವರ ಕಲಾಕುಂಚದ ಆಲೋಚನೆ ಬದಲಾಗುತ್ತದೆ. ಯಾವುದೇ ಪೇಂಟಿಂಗ್ ಬಿಡಿಸುವ ಮೊದಲು ಆಳವಾಗಿ ಸಂಶೋಧನೆ ನಡೆಸಿ ನಂತರ ತಮ್ಮ ಕಲಾಕುಂಚಕ್ಕೆ ಮೆರುಗು ನೀಡುತ್ತಾರೆ.ಈಗಿನ ಆಧುನಿಕ ಯುಗದಲ್ಲಿ, ಧಾವಂತದ ಬದುಕಿನಲ್ಲಿ ಎಲ್ಲರೂ, ಬಾಯಿ ರುಚಿಗೋಸ್ಕರ ಕುರುಕಲು ತಿಂಡಿ, ಜಂಕ್‌ಫುಡ್ ತಿಂದು ತಮ್ಮ ದೇಹದ ಬೊಜ್ಜು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಇಂದಿನ ಹೆಣ್ಣುಮಕ್ಕಳು ಕೈಗೆ ಸಿಕ್ಕದ್ದನ್ನು ತಿಂದು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.ಕಲಾವಿದರಾಗಿ ಜಗದೀಶ ಕಡೂರು ಅವರು ತಮ್ಮ ಕಲಾಕುಂಚದಲ್ಲಿ ಜಂಕ್‌ಫುಡ್, ಕುರುಕಲು ತಿಂಡಿ, ಫಿಜ್ಜಾ, ಬರ್ಗರ್ ತಿನ್ನುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.ಅವರ ಅನೇಕ ಕಲಾಕೃತಿಗಳು   ಬದಲಾಗಿರುವ ಸ್ತ್ರೀಯ ಅನೇಕ ರೂಪುಗಳನ್ನು ತೋರಿಸುತ್ತವೆ. ಕೊನೆಗೆ ಇದಕ್ಕೆಲ್ಲ ಅವರು ನೀಡುವ ಪರಿಹಾರ ಯೋಗ. ಯೋಗದಿಂದ ಸ್ವಲ್ಪವಾದರೂ ಮನಶ್ಯಾಂತಿ ಹೊಂದಬಹುದು. ಈಗಿನ ಆಧುನಿಕ ಧಾವಂತದ ಬದುಕಿಗೆ ಯೋಗವೇ ಪರಿಹಾರ ಎಂದು ಸಂದೇಶವನ್ನು ನೀಡುತ್ತವೆ.ಕಲಾವಿದರ ಬಗ್ಗೆ ಒಂದಿಷ್ಟು: ಜಗದೀಶ ಕಡೂರು ಅವರಿಗೆ ಬಾಲ್ಯದಿಂದಲೇ ಏನಾದರೂ ಹೊಸದನ್ನು ಮಾಡಬೇಕೆಂಬ ಕಲ್ಪನೆ, ತುಡಿತ. ಆ ತುಡಿತದಿಂದಲೇ ಬಣ್ಣದ ಬೆನ್ನು ಹತ್ತಿದವರು. ಮನೆಯವರ ವಿರೋಧದ ನಡುವೆಯೂ ಪೇಂಟಿಂಗ್ ಮತ್ತು ಡ್ರಾಯಿಂಗ್‌ನಲ್ಲಿ ಡಿಪ್ಲೊಮಾ ಪಡೆದರು.ನಂತರ ಅಲ್ಲಿಂದ ಅವರ ಕಲಾ ಜೀವನದ ಆರಂಭ. ಇದುವರೆಗೂ ಏಕವ್ಯಕ್ತಿ ಪ್ರದರ್ಶನಗಳು ಚಿಕ್ಕಮಂಗಳೂರು, ಮೂಡಿಗೆರೆ, ಬೆಂಗಳೂರು, ಕೊಚ್ಚಿನ್, ಬಾಂಬೆಯಲ್ಲಿ ಪ್ರದರ್ಶನಗೊಂಡಿವೆ. ಇವರಿಗೆ ಮೈಸೂರು ದಸರಾ ಅವಾರ್ಡ್‌ಗಳು ಮತ್ತು ನ್ಯಾಷನಲ್ ಲೆವೆಲ್ ಆರ್ಯಭಟ ಪ್ರಶಸ್ತಿಯು ಲಭಿಸಿದೆ.ಇದುವರೆಗೂ ಇವರು ಒಂದೊಂದು ಆಲೋಚನೆ ರೂಪು ನೀಡಿ ತಮ್ಮ ಕಲಾಕೃತಿಗಳನ್ನು ರಚಿಸಿದ್ದಾರೆ. 2007 ರಲ್ಲಿ ಹೆಣ್ಣಿನ ಆಸೆ ಆಕಾಂಕ್ಷೆಗಳು ಎಂಬ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ನಿರೀಕ್ಷೆಗಳು, ನೆರಳು-ಬೆಳಕು ಎಂಬ ಆಲೋಚನೆಗಳಿಂದ ಅವರು ರಚಿಸಿದ ಕಲಾಕೃತಿಗಳು ಜನರ ಮನ ಸೆಳೆದಿದ್ದವು.`ಬಣ್ಣಗಳೆಂದರೆ ನನಗೆ ಒಂಥರಾ ಹುಚ್ಚು ಕಲ್ಪನೆ. ಆ ಕಲ್ಪನೆಯಂತೆ ನನ್ನ ಕಲಾಕೃತಿಗಳು ಒಡಮೂಡಿ ಬರುತ್ತವೆ ಮನಸ್ಸಿನ ಆಳದಿಂದ. ಈಗಿನ ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳು ಜಂಕ್‌ಫುಡ್ ತುಂಬಾ ಸೇವಿಸುವುದರಿಂದ ಅವರ ದೇಹ ರಚನೆಯಲ್ಲಿ ಬದಲಾವಣೆಯಾಗುತ್ತಿದೆ. ಅಲ್ಲದೇ. ವಿದೇಶಿಯರು ನಮ್ಮ ಒಳ್ಳೆಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಆದರೆ, ನಾವು ಅವರ ಸಂಸ್ಕೃತಿಯನ್ನು ಅನುಸರಿಸಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.ಕಲಾವಿದನಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ `ಒಬೆಸಿಟಿ ಎನಾರಾಮಸ್ ಇಂಡಿಯಾ ಗೋಸ್ ಎಕ್ಸ್‌ಎಕ್ಸ್‌ಎಲ್~ ಎಂಬ ಆಲೋಚನೆಯೊಂದಿಗೆ ಈ ಕಲಾಕೃತಿಗಳನ್ನು ರಚಿಸಿದ್ದೇನೆ~ ಎಂದು ತಮ್ಮ ಕಲಾಕೃತಿಗಳ ಮೆರುಗನ್ನು ಬಿಚ್ಚಿಡುತ್ತಾರೆ ಜಗದೀಶ.ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ `ಒಬೆಸಿಟಿ ಎನಾರಾಮಸ್ ಇಂಡಿಯಾ ಗೋಸ್ ಎಕ್ಸ್‌ಎಕ್ಸ್‌ಎಲ್~  ಕಲಾಕೃತಿಗಳು ಮಾರ್ಚ್ 5 ರಿಂದ 11 ರ ವರೆಗೆ ಪ್ರದರ್ಶನಕ್ಕಿವೆ. 98863 25655 ಮಾಹಿತಿಗೆ ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.