ಶುಕ್ರವಾರ, ಏಪ್ರಿಲ್ 16, 2021
31 °C

ತೆಂಗಿನಕಾಯಿ ಒಡೆದು ಪ್ರತಿಭಟನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಕ್ಕಡ (ಉಪ್ಪಿನಂಗಡಿ): ಎಂಡೊ ಸಲ್ಫಾನ್ ವಿರೋಧಿ ಹೋರಾಟ ಸಮಿತಿ ವಾರದಿಂದ ಮುಖ್ಯಮಂತ್ರಿಗೆ ಕಾರ್ಡ್ ಚಳವಳಿ ನಡೆಸುತ್ತಿದ್ದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಂತ್ರಸ್ತರು ಬುಧವಾರ ನಿಡ್ಲೆ ಬೂಡುಜಾಲು ಉಳ್ಳಾಲ್ತಿ ದೈವಸ್ಥಾನದ ಎದುರು ರಸ್ತೆಗೆ ತೆಂಗಿನಕಾಯಿಯನ್ನು ಈಡು ಹೊಡೆದು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು.ಎಂಡೊಸಲ್ಫಾನ್ ಪೀಡಿತರಿಗೆ ಕೇರಳ ಮಾದರಿಯಲ್ಲಿ ಪರಿಹಾರ ವಿತರಿಸಬೇಕು ಹಾಗೂ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕಿನ ಎಂಡೊಸಲ್ಫಾನ್ ವಿರೋಧಿ ಹೋರಾಟಗಾರರು ರಾಜ್ಯದ ಮುಖ್ಯಮಂತ್ರಿಗೆ ಕಾರ್ಡು ಚಳವಳಿ ಆರಂಭಿಸಿದ್ದು ಹತ್ತು ಸಾವಿರ ಮೇಲ್ಪಟ್ಟು ಕಾರ್ಡುಗಳು ಕಳುಹಿಸಿಸಲಾಗಿದೆ. ಆದರೂ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಹಾಗಾಗಿ ಆಕ್ರೋಶಗೊಂಡ ಸಂತ್ರಸ್ತರು ತಮ್ಮ ಅಸಹನೆ ವ್ಯಕ್ತಪಡಿಸಲು ನೂತನ ಮಾರ್ಗ ಅನುಸರಿಸಿದರು.  ಕನ್ಯಾಡಿ ಸೇವಾ ಭಾರತಿ ಸಂಸ್ಥೆಯ ವಿನಾಯಕ್ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ನಿಡ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ, ಎಂಡೊ ಸಲ್ಫಾನ್ ವಿರೋಧಿ ಹೊರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.