ಶುಕ್ರವಾರ, ಮೇ 14, 2021
21 °C

ತೆಂಗು ಬೆಳೆಗಾರರಿಗೆ ಸರ್ಕಾರ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ತೆಂಗು ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ. ಈ ವಿಷಯದಲ್ಲಿ ಗೊಂದಲ ಬೇಡ. ಬೆಂಬಲ ಬೆಲೆ ಘೊಷಣೆ ಸಂಬಂಧ ಸದ್ಯದಲ್ಲೇ ಸಂಪುಟ ಉಪ ಸಮಿತಿ ತೀರ್ಮಾನ ತೆಗೆದುಕೊಳ್ಳಲಿದೆ' ಎಂದು ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಶುಕ್ರವಾರ ವಿಧಾಸನಭೆಗೆ ತಿಳಿಸಿದರು.ತೆಂಗು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿಯಮ 69ರಡಿ ನಡೆದ ಚರ್ಚೆ ಬಳಿಕ ಸಚಿವರು ಉತ್ತರ ನೀಡಿದರು.

`ಬರಗಾಲದ ಕಾರಣಕ್ಕೆ ಹಲವು ಕಡೆ ಬೆಳೆ ನಷ್ಟ ಆಗಿದೆ. ಇದರ ಜತೆಗೆ ಕೊಬ್ಬರಿಯ ಬೆಲೆ ಕುಸಿದಿರುವುದೂ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಇದೇ 12ರಿಂದ ಅಗತ್ಯ ಇರುವ ಕಡೆ ಕೊಬ್ಬರಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಆ ವೇಳೆಗೆ ಬೆಂಬಲ ಬೆಲೆ ಘೋಷಿಸಲಾಗುವುದು' ಎಂದರು.`ಬೆಳೆ ನಷ್ಟಕ್ಕೆ ಪರಿಹಾರ ಕೊಡುವ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡುತ್ತಿದ್ದಾರೆ. ಅವರ ಬಳಿ ರೂ100 ಕೋಟಿ ಇದೆ. ಕೇಂದ್ರ ಸರ್ಕಾರಕ್ಕೂ ರೂ 321 ಕೋಟಿ ಕೊಡುವಂತೆ ಪತ್ರದ ಮೂಲಕ ಮನವಿ ಮಾಡಲಾಗಿದೆ' ಎಂದು ಅವರು ವಿವರಿಸಿದರು.`ತೆಂಗಿಗೆ ತಗುಲಿರುವ ನುಸಿ ರೋಗ ನಿವಾರಣೆಗೆ ಶೇ 50ರ ರಿಯಾಯಿತಿ ದರದಲ್ಲಿ ಔಷಧಿ ಕೊಡುತ್ತಿದ್ದು, ಅದನ್ನು ರೈತರು ಬಳಸಿಕೊಳ್ಳಬೇಕು. ರೋಗ ನಿವಾರಣೆಗೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲೂ ಪ್ರಯತ್ನ ನಡೆದಿದೆ' ಎಂದು ಅವರು     ಹೇಳಿದರು.`ಕೊಬ್ಬರಿಯಿಂದ ಸಕ್ಕರೆ ಉತ್ಪಾದಿಸುವ ತಂತ್ರಜ್ಞಾನದ ಬಗ್ಗೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಅಗತ್ಯ ಬಿದ್ದರೆ ಅವರನ್ನು ವಿದೇಶಕ್ಕೂ ಕಳುಹಿಸಲಾಗುವುದು' ಎಂದರು.ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರು ಮಾತನಾಡಿ, `ಕ್ವಿಂಟಲ್‌ಗೆ ರೂ 9  ಸಾವಿರ ಇದ್ದ ಕೊಬ್ಬರಿ ಬೆಲೆ 4,400 ರೂಪಾಯಿಗೆ ಇಳಿದಿದೆ. ಸರ್ಕಾರ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.