ತೆಂಡೂಲ್ಕರ್ ಭೇಟಿಯಾಗಲು ಅವಕಾಶ!

7

ತೆಂಡೂಲ್ಕರ್ ಭೇಟಿಯಾಗಲು ಅವಕಾಶ!

Published:
Updated:

ನವದೆಹಲಿ (ಪಿಟಿಐ): ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ, ಅವರೊಂದಿಗೆ ಕಾಲ ಕಳೆಯುವ ಮಹತ್ವದ ಅವಕಾಶ ಜಗತ್ತಿನ ಆರು ನಗರಗಳ ಆಯ್ದ ಕೆಲ ಕ್ರೀಡಾ ಪ್ರೇಮಿಗಳಿಗೆ ಲಭಿಸಲಿದೆ. ಫಿಡೆಲಿಸ್ ವರ್ಲ್ಡ್ ಗ್ರೂಪ್ ಕಂಪೆನಿ ಈ ಅವಕಾಶವನ್ನು ಕಲ್ಪಿಸಿದೆ.`ವರ್ಲ್ಡ್ ಗ್ರೂಪ್‌ನ ಕೇಂದ್ರಿಯ ಕಚೇರಿಯಿರುವ ದುಬೈಯಲ್ಲಿ ಜೂನ್ 9ರಂದು ಈ ಕಾರ್ಯಕ್ರಮಕ್ಕೆ ಚಾಲನೆ ಲಭಿಸಲಿದೆ. ಸಚಿನ್ ಈ ವೇಳೆ ಕ್ರಿಕೆಟ್ ವೃತ್ತಿ ಬದುಕಿನ ಅನುಭವಗಳು ಹಾಗೂ ಕೆಲ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಲಿದ್ದಾರೆ~ ಎಂದು ಕಂಪೆನಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟು ಆರು ನಗರಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆಯ್ದ ಅಭಿಮಾನಿಗಳ ಜೊತೆ ಭೋಜನ ಸಹ ಮಾಡಲಿದ್ದಾರೆ.`ಫಿಡೆಲಿಸ್ ಅಭಿಮಾನಿಗಳನ್ನು ಹಾಗೂ ಬೆಂಬಲಿಗರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಸಾಕಷ್ಟು ನೆನಪುಗಳು ನನ್ನಲ್ಲಿವೆ. ಅವುಗಳನ್ನು ಹಂಚಿಕೊಳ್ಳಲು ಸಂತಸವೆನಿಸುತ್ತದೆ~ ಎಂದು ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry