ಶುಕ್ರವಾರ, ಜೂನ್ 18, 2021
28 °C

ತೆನೆಕಟ್ಟದ ಭತ್ತದ ಫಸಲು: ರೈತರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ನಾಟಿ ಮಾಡಿದ ಭತ್ತದ ಫಸಲು ತೆನೆ ಬಿಡದೇ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಕಳವಳಗೊಂಡಿದ್ದಾರೆ.ತಾಲ್ಲೂಕಿನ ದರೂರು ಗ್ರಾಮದಲ್ಲಿ ಬೇಸಿಗೆ ಹಂಗಾಮಿನಲ್ಲಿ ಅಲ್ಪಾವಧಿಯ ಕಾವೇರಿ ಸೋನಾ ಭತ್ತವನ್ನು ಸುಮಾರು 65ಕ್ಕೂ ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ನಾಟಿ ಮಾಡಿದ್ದಾರೆ.ಭತ್ತದ ಫಸಲು ಸಮೃದ್ಧಿಯಾಗಿ ಬೆಳೆದಿದ್ದು, ತೆನೆ ಬಿಡುವ ಹಂತ ಬಂದರೂ ಫಸಲು ತೆನೆಕಟ್ಟುವ ಸೂಚನಗಳೇ ಕಂಡು ಬರುತ್ತಿಲ್ಲ ಎಂಬ ಆತಂಕ ರೈತರಲ್ಲಿ ಮೂಡಿದೆ.ಬೇಸಿಗೆ ಬೆಳೆಗೆ ನೀರಿನ ಕೊರತೆಯಿಂದ ಅಲ್ಪಾವಧಿಯಲ್ಲಿಯೇ ಕೈಗೆ ಬರುವ ಭತ್ತವನ್ನು ಬೆಳೆಯಬೇಕು ಎಂಬ ಉದ್ದೇಶದಿಂದ ಈ ಬಾರಿ ಖಾಸಗಿ ನಾಗಾರ್ಜುನ ಕಂಪನಿಯ ಕಾವೇರಿ ಸೋನಾ ತಳಿ ಭತ್ತವನ್ನು ಗ್ರಾಮದ ಭತ್ತ ಬೆಳೆಗಾರರಾದ ಬಸವರಾಜ ಸ್ವಾಮಿ, ಎಲ್.ಪಕ್ಕೀರಪ್ಪ, ಕೆ.ರಾಜಶೇಖರ, ಎಸ್.ರುದ್ರಗೌಡ, ಎಸ್.ಕುಮಾರಗೌಡ, ವಿರೂಪಾಕ್ಷಗೌಡ, ಶಂಕರರೆಡ್ಡಿ, ಹೊನ್ನೂರುವಲಿ, ವೀರಭದ್ರಸ್ವಾಮಿ ಎಂಬುವವರು ನಾಟಿ ಮಾಡಿದ್ದಾರೆ.ನಾಗಾರ್ಜುನ ಕಂಪನಿಯ ಕಾವೇರಿ ಸೋನಾ ಭತ್ತದ ಬೀಜವು ಮಾರಾಟಗಾರರ ಮಾಹಿತಿಯಂತೆ 130 ರಿಂದ 140 ದಿನಗಳಲ್ಲಿ ಪೂರ್ಣ ಪ್ರಮಾಣಲ್ಲಿ ಭತ್ತ ಬೆಳೆದು ಕಟಾವು ಹಂತಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಸಸಿ ನಾಟಿ ಮಾಡಿ 120 ದಿನಗಳು ಕಳೆದರೂ ಸಹ ಭತ್ತ ಇನ್ನೂ ತೆನೆ ಕಟ್ಟುವ ಯಾವುದೇ ಸೂಚನೆಗಳು ಕಂಡು ಬರದೇ ಇರುವುದು ರೈತರನ್ನು ಅತಂಕಕ್ಕೆ ಈಡುಮಾಡಿದೆ.`ಕಳೆದ 11-11-11ರಂದು ಸಿರುಗುಪ್ಪದ ಮಂಜುನಾಥ ಆಗ್ರೋ ಏಜೇನ್ಸಿಯಿಂದ ಎನ್.ಎಸ್ ಕಾವೇರಿ ಸೋನಾ ಬೀಜಗಳನ್ನು ಖರೀದಿಸಿದ್ದೇವೆ. ಕಳೆದ ನವೆಂಬರ್ ತಾ.17ಕ್ಕೆ ಸಸಿ ಹಾಕಿ,  ಡಿಸೆಂಬರ್25ರಂದು ಭತ್ತ ನಾಟಿ ಮಾಡಿದ್ದೇವೆ. ಸಕಾಲಕ್ಕೆ ರಸಗೊಬ್ಬರ ಮತ್ತು ಔಷಧಿ ಸಿಂಪರಣೆ ಮತ್ತು ನೀರು ಪೂರೈಸಿದ್ದೇವೆ, ಬೇರೆ ಜಮೀನುಗಳಲ್ಲಿ ಬೆಳೆದಿರುವ ಭತ್ತಕ್ಕಿಂತ ನಮ್ಮ ಭತ್ತ ಅತ್ಯಂತ ಸಮೃದ್ಧವಾಗಿದೆ. ಆದರೆ ಇಲ್ಲಿಯವರೆಗೆ ತೆನೆ ಬಿಟ್ಟಿಲ್ಲ~ ಎಂದು ರೈತರು ಆತಂಕ ವ್ಯಕ್ತಪಡಿಸಿದರು.ಬೀಜ ಮಾರಾಟಗಾರಿಗೆ  ಈ  ವಿಷಯ ತಿಳಿಸಿದ್ದೇವೆ,  ಹೊಲಗಳಿಗೆ ಭೇಟಿ ನೀಡಿ ಕಂಪನಿಯ ಉನ್ನತ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿ ಹೋದವರು ಇಂದಿಗೂ ತಿರುಗಿ ನೋಡಿಲ್ಲ. ಇದಕ್ಕೆ ಅಂಗಡಿ ಮಾಲೀಕರು ಹೊಣೆಯೋ ಇಲ್ಲವೆ ಕಂಪನಿಯ ಅಧಿಕಾರಿಗಳ ನಿರ್ಲಕ್ಷ್ಯವೋ ತಿಳಿಯದಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಇಲಾಖೆಯವರು, ಭತ್ತ ತಳಿ ತಜ್ಞರು ತಮ್ಮ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿಬೇಕೆಂದು ರೈತರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.