ತೆರವಾದ ಗುಡಿಸಲು ಪುನರ್ನಿರ್ಮಾಣ

7

ತೆರವಾದ ಗುಡಿಸಲು ಪುನರ್ನಿರ್ಮಾಣ

Published:
Updated:

ಅಂಕೋಲಾ: ಕಾಮಗೆ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶದಲ್ಲಿ ನಿರ್ಮಿಸಿದ ಗುಡಿಸಲನ್ನು ನ. 7ರಂದು ತೆರವುಗೊಳಿಸಿದ್ದರು. ಆದರೆ ಕರ್ನಾಟಕ ಪ್ರಾಂತ ರೈತ ಸಂಘದವರು ಅರಣ್ಯ ಇಲಾಖೆಯವರ ಧೋರಣೆಯನ್ನು ಖಂಡಿಸಿ ಸೋಮವಾರ ಸ್ಥಳೀಯರ ನೆರವಿನೊಂದಿಗೆ ಪುನಃ ಗುಡಿಸಲನ್ನು ನಿರ್ಮಿಸಿಕೊಟ್ಟಿದ್ದಾರೆ.ಸಾವಿತ್ರಿ ಆಯು ಗೌಡ ಇವರಿಗೆ ಸ್ವಂತ ಜಾಗ ಇಲ್ಲದಿರುವುದರಿಂದ ಅರಣ್ಯ ಇಲಾಖೆಯ ಎರಡು ಗುಂಟೆಯನ್ನು ಜಾಗವನ್ನು ಅತಿಕ್ರಮಣ ಮಾಡಿಕೊಂಡು ಗುಡಿಸಲು ನಿರ್ಮಿಸಿ ವಾಸವಾಗಿದ್ದರು. ಆದರೆ ಅರಣ್ಯ ಇಲಾಖೆಯವರು ಏಕಾಏಕಿ ಬಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಗುಡಿಸಲನ್ನು ತೆರವುಗೊಳಿಸಿದ್ದರು.ಇವರಿಗೆ ಸ್ವಂತ ಜಾಗ ಇಲ್ಲದಿರುವುದರಿಂದ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ತಾಲ್ಲೂಕು ಘಟಕ ಅಧ್ಯಕ್ಷ ಗೌರೀಶ ನಾಯಕ, ಪ್ರಮುಖರಾದ ದೇವರಾಯ ನಾಯಕ ಅವರು ಸ್ಥಳದಲ್ಲಿಯೇ ನಿಂತು ಸ್ಥಳೀಯರ ನೆರವಿನಿಂದ ಗುಡಿಸಲನ್ನು ನಿರ್ಮಿಸಿಕೊಟ್ಟಿದ್ದಾರೆ.ಮತ್ತೆ ಅರಣ್ಯ ಇಲಾಖೆಯವರು ಗುಡಿಸಲನ್ನು ತೆರವುಗೊಳಿಸಲು ಮುಂದಾದರೆ ಇಲಾಖೆಯ ಕಛೇರಿ ಎದುರೇ ಧರಣಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry