ತೆರಿಗೆದಾರರ ಮನೆ ಬಾಗಿಲಿಗೆ ಸಂಚಾರಿ ತೆರಿಗೆ ಕೇಂದ್ರ

7

ತೆರಿಗೆದಾರರ ಮನೆ ಬಾಗಿಲಿಗೆ ಸಂಚಾರಿ ತೆರಿಗೆ ಕೇಂದ್ರ

Published:
Updated:
ತೆರಿಗೆದಾರರ ಮನೆ ಬಾಗಿಲಿಗೆ ಸಂಚಾರಿ ತೆರಿಗೆ ಕೇಂದ್ರ

ನವದೆಹಲಿ (ಪಿಟಿಐ): ಆದಾಯ ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ ! ಏಕೆಂದರೆ ಇನ್ನು ಮುಂದೆ ತೆರಿಗೆದಾರರು ಕಚೇರಿಗೆ ಹೋಗಿ ತೆರಿಗೆ ಪಾವತಿಸಬೇಕಿಲ್ಲ. ಬದಲು ಮನೆ ಬಾಗಿಲಿಗೆ ಬರುವ `ಟ್ಯಾಕ್ಸ್ ಕಿಯಾಸ್ಕ್~ನಲ್ಲಿ  (ಸಂಚಾರಿ ತೆರಿಗೆ ಕೇಂದ್ರ) ತೆರಿಗೆ ಪಾವತಿಸಬಹುದು.ತೆರಿಗೆದಾರರ ಸಂಬಂಧಿತ ಸೇವೆಗಳಲ್ಲಿ ಅನುಕೂಲ ಹೆಚ್ಚಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಇಂತಹ ವಿನೂತನ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿರುವ ಆದಾಯ ತೆರಿಗೆ ಇಲಾಖೆಯು ಮುಂಬರುವ ಆದಾಯ ತೆರಿಗೆ ಸಲ್ಲಿಕೆಯ ಋತುವಿನೊಳಗೆ ಅಧಿಕ ಸಂಖ್ಯೆಯಲ್ಲಿ ತೆರಿಗೆದಾರರು ನೆಲೆಸಿರುವ ಜನವಸತಿ ಪ್ರದೇಶದಲ್ಲಿ `ಟ್ಯಾಕ್ಸ್ ಕಿಯಾಸ್ಕ್~ ಎಂಬ ಸಂಚಾರಿ ತೆರಿಗೆ ಪಾವತಿ ಕೇಂದ್ರವುಳ್ಳ ವಾಹನಗಳನ್ನು ನಿಯೋಜಿಸುವುದಾಗಿ ಹೇಳಿದೆ.ಆದಾಯ ತೆರಿಗೆ ಇಲಾಖೆ ಸಂಬಂಧಿತ ಸೇವೆಗಳಿಗಾಗಿ ತೆರಿಗೆದಾರರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ದೃಷ್ಟಿಯಿಂದ ಈ ವಿನೂತನ ಸೇವೆ ಜಾರಿಗೆ ತರಲಾಗುತ್ತಿದೆ ಎಂದು ಇಲಾಖೆ ಹೇಳಿದೆ.ಯೋಜನೆಯನ್ನು ಕಳೆದ ವರ್ಷದಿಂದ ಹಲವು ನಗರಗಳಲ್ಲಿ ತಾತ್ಕಾಲಿಕ ಕೀಆಸ್ಕ್‌ಗಳನ್ನು ತೆರೆಯುವ ಮೂಲಕ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿರುವ ಇಲಾಖೆಯು ಈ ಕುರಿತಂತೆ ಅನೇಕ ನಗರಗಳಲ್ಲಿ ಜನಾಭಿಪ್ರಾಯಗಳನ್ನು ಸಂಗ್ರಹಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry