ತೆರಿಗೆದಾರರ, ಹಿರಿಯ ನಾಗರಿಕರ ಮೊಗದಲ್ಲಿ ನಗು

7

ತೆರಿಗೆದಾರರ, ಹಿರಿಯ ನಾಗರಿಕರ ಮೊಗದಲ್ಲಿ ನಗು

Published:
Updated:

ನವದೆಹಲಿ (ಪಿಟಿಐ): ನಿರೀಕ್ಷೆಯಂತೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ತಮ್ಮ ಬಜೆಟ್‌ನಲ್ಲಿ ಜನಸಾಮಾನ್ಯರ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ರೂ 20,000ದಿಂದ ರೂ 1,80,000ಕ್ಕೆ ವಿಸ್ತರಿಸುವ ಮೂಲಕ ತೆರಿಗೆದಾರರ ಮುಖದಲ್ಲಿ ನಗುಮೂಡಿಸಿದ್ದಾರೆ.ಹಿರಿಯ ನಾಗರಿಕರಿಗೆ ಕೂಡ ಹೆಚ್ಚುವರಿ ಅನುಕೂಲ ಮಾಡಿ ಕೊಟ್ಟಿರುವ ಪ್ರಣವ್, ಮಹಿಳೆಯರನ್ನು ಹೆಚ್ಚುವರಿ ವಿನಾಯಿತಿಗಳಿಂದ ಹೊರಗಿಟ್ಟಿದ್ದಾರೆ.ಸಾಮಾನ್ಯ ತೆರಿಗೆದಾರರ ಆದಾಯ ತೆರಿಗೆ  ವಿನಾಯಿತಿ ಮಿತಿಯನ್ನು ರೂ 1.80 ಲಕ್ಷಕ್ಕೆ ಏರಿಸಲಾಗಿದ್ದು, ಹಿರಿಯ ನಾಗರಿಕರ ಮಿತಿಯನ್ನು ರೂ 2.40 ಲಕ್ಷದಿಂದ ರೂ 2.50 ಲಕ್ಷಕ್ಕೆ ವಿಸ್ತರಿಸಲಾಗಿದೆ.  ಹಿರಿಯ ನಾಗರಿಕರ ವಯಸ್ಸಿನ ಮಿತಿಯನ್ನು 65ರಿಂದ 60ಕ್ಕೆ ಇಳಿಸುವ ಕುರಿತೂ ಪ್ರಣವ್ ಮುಖರ್ಜಿ ತಮ್ಮ 2011-12ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.ಇದರ ಹೊರತಾಗಿ, 80 ವರ್ಷ ಮೇಲ್ಪಟ್ಟ ವಯಸ್ಸಿನವರನ್ನು ಪ್ರತ್ಯೇಕವಾಗಿ ‘ಅತ್ಯಂತ ಹಿರಿಯ’ ನಾಗರಿಕ ಎಂದು ವಿಭಾಗಿಸಲಾಗಿದ್ದು,  ಐದು ಲಕ್ಷ ರೂಪಾಯಿ ತನಕದ ಅವರ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.ಆದಾಗ್ಯೂ, ಅತ್ಯಂತ ಹಿರಿಯ ನಾಗರಿಕರ, ರೂ 5 ಲಕ್ಷದಿಂದ ರೂ 8 ಲಕ್ಷದವರೆಗಿನ ಆದಾಯಕ್ಕೆ ಶೇ20ರಷ್ಟು ತೆರಿಗೆ ವಿಧಿಸಲಾಗಿದೆ. ರೂ 8 ಲಕ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.ಸಾಮಾನ್ಯ ತೆರಿಗೆದಾರರು ರೂ 1.8ಲಕ್ಷದಿಂದ ರೂ 5 ಲಕ್ಷದವರೆಗಿನ ಆದಾಯಕ್ಕೆ ಶೇ10ರಷ್ಟು ತೆರಿಗೆ ಪಾವತಿಸಬೇಕಾಗಿದೆ. ರೂ 5ರಿಂದ ರೂ 8 ಲಕ್ಷದವರೆಗೆ ಆದಾಯ ಆದಾಯದಾರರು ಶೇ 20ರಷ್ಟು, ರೂ 8 ಲಕ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟು ಆದಾಯ ಹೊಂದಿರುವವರು ಶೇ 30ರಷ್ಟು ತೆರಿಗೆ ಕಟ್ಟಬೇಕಿದೆ.ಮಹಿಳೆಯರ ಆದಾಯ ತೆರಿಗೆ ವಿನಾಯಿತಿ ಮಿತಿ ರೂ 1.9ಲಕ್ಷ. ಉಳಿದಂತೆ ಸಾಮಾನ್ಯ ತೆರಿಗೆದಾರರಿಗೆ ವಿಧಿಸಲಾಗಿರುವ ತೆರಿಗೆ ಪ್ರಮಾಣ ಮಹಿಳೆಯರಿಗೂ ಅನ್ವಯವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry