ಭಾನುವಾರ, ಅಕ್ಟೋಬರ್ 20, 2019
21 °C

ತೆರಿಗೆ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ: ಉಪನ್ಯಾಸ

Published:
Updated:

ಬೆಳಗಾವಿ: ಕೆಎಲ್‌ಎಸ್  ಸಂಸ್ಥೆಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಜುಕೇಶನ್ ಅಂಡ್   ರಿಸರ್ಚ್ ಕೇಂದ್ರದಲ್ಲಿ ಇತ್ತೀಚೆಗೆ ಎಂಬಿಎ ವಿದ್ಯಾರ್ಥಿಗಳಿಗೆ ಲೆಕ್ಕ, ತೆರಿಗೆ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರೇಶ್ಮಾ ಮೊರಪ್ಪನವರ ಮಾತನಾಡಿ, ಲೆಕ್ಕಪತ್ರ ಹಾಗೂ ತೆರಿಗೆ ಕ್ಷೇತ್ರದಲ್ಲಿ ಪರಿಣಿತಿ ಹೊಂದಬೇಕು. ಉದ್ಯೋಗ ಪಡೆದುಕೊಂಡು ಹೇಗೆ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎಂಬ ಕುರಿತು ಸಲಹೆ ನೀಡಿದರು.`ಸಂದರ್ಶನಕ್ಕೆ ಮುನ್ನ ಯಾವ ರೀತಿ ಸಿದ್ಧತೆ ನಡೆಸಬೇಕು. ಸಂದರ್ಶನದ ಪರೀಕ್ಷೆ ಎದುರಿಸಬೇಕು~ ಎಂಬ ಕುರಿತು ವಿವರಿಸಿದರು. ಸುಹಾಸ್ ರಜಪೂತ ಮತ್ತಿತರರು ಪಾಲ್ಗೊಂಡಿದ್ದರು.

 

Post Comments (+)