ತೆರಿಗೆ ತಪ್ಪಿಸುವ ಯತ್ನಕ್ಕೆ ತಡೆ: ಜಿ-20 ನಿರ್ಣಯ

7

ತೆರಿಗೆ ತಪ್ಪಿಸುವ ಯತ್ನಕ್ಕೆ ತಡೆ: ಜಿ-20 ನಿರ್ಣಯ

Published:
Updated:

ಸೇಂಟ್ ಪೀಟರ್ಸ್‌ಬರ್ಗ್ (ಪಿಟಿಐ): ನಿಶ್ಚಿತ ಅಲ್ಲದ ವರಮಾನದ ಮೇಲೆ ಪರಿಣಾಮಕಾರಿಯಾಗಿ ತೆರಿಗೆ ವಿಧಿಸುವುದು ಬಹಳ ಸವಾಲಿನ ವಿಷಯ ಎಂಬುದನ್ನು ಪ್ರಧಾನಿ ಮನಮೋಹನ್ ಸಿಂಗ್ ಸೇರಿ ಜಿ-20 ನಾಯಕರು ಒಪ್ಪಿಕೊಂಡರು.ತೆರಿಗೆ ಪಾವತಿಸದಿರುವುದು, ಹಾನಿಕಾರಕ ಪದ್ಧತಿಗಳು ಮತ್ತು ಕಟ್ಟುನಿಟ್ಟು ತೆರಿಗೆ ಪದ್ಧತಿ ನಿರ್ಮೂಲನೆ ಮಾಡಲು ನಿಯಮ ಬದಲಿಸುವ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅವರು ಶುಕ್ರವಾರ ಇಲ್ಲಿ ಶಪಥ ಮಾಡಿದರು.ಈ ಸಂಬಂಧ ಮುಂದುವರಿದ ಮತ್ತು ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಜಿ-20 ಶೃಂಗಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.ಬಹುರಾಷ್ಟ್ರೀಯ ಕಂಪೆನಿಗಳು ತೆರಿಗೆ ಕಡಿತಕ್ಕೆ ಮುಂದಾಗುವುದನ್ನು ಕಾನೂನಿನಲ್ಲಿ ಪ್ರೋತ್ಸಾಹಿಸಬಾರದು ಎಂದೂ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.ಭ್ರಷ್ಟಾಚಾರ ತೊಡೆದು ಹಾಕಲು,  ಜಾಗತಿಕ ಮಟ್ಟದಲ್ಲಿ ಮಾಹಿತಿ ವಿನಿಮಯ ಮತ್ತು ಪರಸ್ಪರ ಸಹಕಾರ ನೀಡುವ ಕುರಿತಂತೆಯೂ ಶೃಂಗಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry